ಜಿಲ್ಲಾ ಸುದ್ದಿಗಳು | District Newsಹಾವೇರಿ-Haveri

ನರೇಗಲ್ ಗಲಭೆ ಆರೋಪಿಗೆ ಆಶ್ರಯ ನೀಡಿಲ್ಲ : ಮಧು ಗೌಡ ಪಾಟೀಲ್

ಹಾನಗಲ್.ಜು.06: ತಾಲೂಕಿನ ನೆರೆಗಲ್ ಗಲಭೆ ಪ್ರಕರಣದ ಆರೋಪಿ ಚೌಕತಲಿ ನೆಗಳು ನಮ್ಮ ಮನೆಯಲ್ಲಿ ಆಶ್ರಯ ಪಡೆದು ಬಚ್ಚಿಕೊಂಡಿದ್ದರು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು

ಪೊಲೀಸರು ನನ್ನನ್ನು ಬೆದರಿಸಿ ಇಂತಹ ಹೇಳಿಕೆ ಪಡೆದಿದ್ದಾರೆ ನಾನು ಬಿಜೆಪಿ ಸದಸ್ಯನು ಅಲ್ಲ ಕಾರ್ಯಕರ್ತನು ಅಲ್ಲ ನಾನೊಬ್ಬ ರೈತ ಅಷ್ಟೇ ಎಂದು ಎತ್ತಿನಹಳಿ ಗ್ರಾಮದ ಮಧು ಗೌಡ ಪಾಟೀಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು

ಶುಕ್ರವಾರ ರಾತ್ರಿ ಒಂಬತ್ತು ಗಂಟೆಗೆ ಹೊತ್ತಿಗೆ ಏಕಾಏಕಿ ಪೊಲೀಸರು ನಮ್ಮ ಮನೆಗೆ ಬಂದು ನಮ್ಮ ಮನೆಯ ಹೊರಗಿನ ಕಟ್ಟೆಯ ಮೇಲೆ ಕುಳಿತಿದ್ದ ಚೌಕತಲಿ ನೆಗಳೂರು ಹಾಗೂ ನನ್ನನ್ನು ಆಡೂರ್ ಪೊಲೀಸ್ ಠಾಣೆ ಕರೆದೊಯಿದು ಒತ್ತಾಯಪೂರ್ವಕವಾಗಿ ಹೇಳಿಕೆ ಪಡೆದಿದ್ದಾರೆ.

ಚೌಕ ತಲಿ ನಮ್ಮ ಮನೆಯ ಕಳೆದ ಮೂರು ದಿನಗಳಿಂದ ಆಶ್ರಯ ಪಡೆದ್ದಾನೆ ಎಂದು ಹೇಳಿಸಿ ನನ್ನ ಸಹಿ ಪಡೆದುಕೊಂಡಿದ್ದಾರೆ ಸಹಿ ಮಾಡಲು ನಿರಾಕರಿಸಿದಾಗ ಬೆದರಿಕೆ ಹಾಕಿ ಒತ್ತಾಯ ಪೂರಕವಾಗಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಮಧು ಪಾಟೀಲ್ ಆರೋಪ ಮಾಡಿದ್ದಾರೆ

ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ್ ಕಮಂಡೊಳ್ಳಿ ಮಾತನಾಡಿ ಮಧು ಗೌಡ ಪಾಟೀಲ್ ಬಿಜೆಪಿ ಕಾರ್ಯಕರ್ತನೆಂದು ಬಿಂಬಿಸಿ ನೆರೆಲ್ ಪ್ರಕರಣ ತಿರಿಚುವ ಹಾಗೂ ಇದನ್ನು ಬಿಜೆಪಿಗೆ ಅಂಟಿಸುವ ದುರಾಲೋಚನೆ ಕಾಂಗ್ರೆಸ್ ಮಾಡುತ್ತಿದೆ ಎಂದು ಹೇಳಿದರು

ಬಿಜೆಪಿ ಮುಖಂಡ ಕಲ್ಯಾಣ ಕುಮಾರ್ ಶೆಟ್ಟರ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ಮಾಡುತ್ತಿದೆ ಆರೂಪಿಸಿದರು

Share with Friends
author avatar
Digital Desk