LatestTop Storiesಜಿಲ್ಲಾ ಸುದ್ದಿಗಳು | District Newsತುಮಕೂರು-Tumakuru

ಕೆರೆಯಲ್ಲಿ ಅಕ್ರಮ ಬಲೆ..!ಗ್ರಾಮಸ್ಥರಿಂದ ಭಾರೀ ಆಕ್ರೋಶ..!

ತುಮಕೂರು : ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಜಿನ್ನಾಗರ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು,ಜಿನ್ನಾಗರ ಕೆರೆಗೆ ಅನಧಿಕೃತವಾಗಿ ಮೀನು ಬಲೆ ಹಾಕಿದ ಸ್ಥಳೀಯ ಸಹಕಾರ ಸಂಘದ ಕಾರ್ಯದರ್ಶಿ ಬಂಗ್ಲಿ ರಾಮಲಿಂಗಯ್ಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಯಾವ ಸಹಕಾರಿ ಸಂಘ ಬೇಡ ಸಂಘ ರದ್ದು ಮಾಡುವುದಕ್ಕೆ ನಾವು ಸರ್ಕಾರಕ್ಕೆ ಬರೆಯುತ್ತೇವೆ ಎಂದು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ,ಯಾವುದೇ ಪೂರ್ವಾನುಮತಿ ಇಲ್ಲದೆ ಅನಧಿಕೃತವಾಗಿ ಬಲೆ ಹಾಕಿರುವುದು ಗ್ರಾಮಸ್ಥರು ಆಕ್ರೋಶಕ್ಕೆ ಕಾರಣವಾಗಿತ್ತು. ಆಡಳಿತ ಅಧಿಕಾರಿಗಳು ಇಲ್ಲದೆ ಕಾರ್ಯದರ್ಶಿಯೇ ಮುಂಚೂಣಿಯಲ್ಲಿ ನಿಂತು ಕೆರೆಗೆ ಬಲೆ ಹಾಕಿಮೀನು ಹಿಡಿಯಲು ಯತ್ನಿಸಿದ್ದಾರೆ ಎನ್ನಲಾಗಿದೆ,ಸಾರ್ವಜನಿಕರ ಆಸ್ತಿಯಾಗಿರುವ ಕೆರೆಯನ್ನು ತನ್ನ ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸುತ್ತಿದ್ದಾರೆ.

ಕೆರೆಯಲ್ಲಿ ಅಕ್ರಮ ಬಲೆಗ್ರಾಮಸ್ಥರಿಂದ ಭಾರೀ ಆಕ್ರೋಶ

ನಿಯಮಬಾಹಿರವಾಗಿ ಬಳಸಿಕೊಳ್ಳುತ್ತಿರುವುದನ್ನು ಕಂಡು ಗ್ರಾಮಸ್ಥರು ಸ್ಥಳದಲ್ಲೇ ರೊಚ್ಚಿಗೆದ್ದು ಕಾರ್ಯದರ್ಶಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ,ಸ್ಥಳಕ್ಕೆ ಸಂಬಂಧಪಟ್ಟ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ಭೇಟಿ ನೀಡಿಲ್ಲ?ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು.

ನಮಗೆ ಮೀನು ಹಿಡಿಯಲು ಬಿಡಿ ನಿಮ್ಮ ಗ್ರಾಮಕ್ಕೆ ಮೀನಿನ ಹಣ ಕೊಡುತ್ತೇನೆ ಎಂದು ಮೊದಲು ಮಾತನಾಡಿದ ಬಂಗ್ಲಿ ರಾಮಲಿಂಗಯ್ಯ,ನಂತರ ನಿಮ್ಮ ಗ್ರಾಮಕ್ಕೆ ನಾನು ಯಾಕೆ ಹಣ ಕೊಡಬೇಕು ಕೋರ್ಟ್ ಆದೇಶ ನನಗೆ ನೀಡಿದೆ ಎಂದು ದೌರ್ಜನ್ಯ ಮಾಡುತ್ತಿರುವ ಬಂಗ್ಲಿ ರಾಮಲಿಂಗಯ್ಯರವರು?

ತಕ್ಷಣ ರೊಚ್ಚಿಗೆದ್ದ ಗ್ರಾಮಸ್ಥರು ಬಂಗ್ಲಿ ರಾಮಲಿಂಗಯ್ಯ ಹಿಡಿದಿದ್ದ ಮೀನನ್ನು ಮತ್ತೆ ಮರಳಿ ಕೆರೆಗೆ ಬಿಡಿಸಿದ್ದಾರೆ,ಗ್ರಾಮ ಪಂಚಾಯಿತಿಗೆ ಮಾಹಿತಿ ಇಲ್ಲದೆ ಏಕಏಕಿ ಮೀನು ಹಿಡಿಯಲು ಬಂದ ಬಂಗಲಿ ರಾಮಯ್ಯನಿಗೆ ಚಳಿ ಬಿಡಿಸಿದ ಜಿನ್ನಾಗರ ಗ್ರಾಮಸ್ಥರು.ಸಹಕಾರ ಸಂಘ ಸೊಸೈಟಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ,ಬಂಗ್ಲಿ ರಾಮಯ್ಯ ಎಂಬುವರು ನಮ್ಮ ಕೆರೆಗೆ ಇದುವರೆಗೂ ಒಂದು ಮೀನು ಬಿಟ್ಟೆ ಇಲ್ಲ? ಆದರೂ ಏಕಾಏಕಿ ಬಂದು ಮೀನು ಹಿಡಿಯುತ್ತಾರೆ ಎಂದು ಕಿಡಿಕಾರಿದ್ದಾರೆ

ಈ ಸಂಬಂಧ ಶಾಸಕರು ಬಂಗ್ಲಿ ರಾಮಲಿಂಗಯ್ಯ ಅವರಿಗೆ ಜಿನ್ನಾಗರ ಕೆರೆಗೆ ಯಾವುದೇ ಬಲೆ ಹಾಕಬಾರದು ಎಂದು ತಿಳಿಸಿದ್ದಾರೆ,ಆದರೂ ಶಾಸಕರ ಮಾತನ್ನು ಸಹ ಧಿಕ್ಕರಿಸಿ ಇಂದು ಬಂಗ್ಲಿ ರಾಮಲಿಂಗಯ್ಯ ಎಂಬುವರು ಅಕ್ರಮವಾಗಿ ಕೆರೆಗೆ ಬಂದಿದ್ದಾರೆ,ಈಗಾಗಲೇ ಬರಗಾಲ ಬಂದಿದ್ದು ರೈತರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ,ಆಡಳಿತ ಅಧಿಕಾರಿಯೇ ಇಲ್ಲದೆ ಇವರು ಅಕ್ರಮವಾಗಿ ಮೀನು ಹಿಡಿಯುತ್ತಿದ್ದಾರೆ.

ಅವರ ಸ್ವಂತ ಕೆರೆ ಇದ್ದರೆ ಕಾನೂನಾತ್ಮಕವಾಗಿ ಮೀನು ಹಿಡಿಯಬೇಕು,ಇದು ಗ್ರಾಮದ ಕೆರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಹ ಇಲ್ಲಮೀನು ಮರಿಗಳನ್ನು ಬಿಟ್ಟು ಅವುಗಳನ್ನು ಸಂರಕ್ಷಣೆ ಮಾಡಿ ಮೀನು ಹಿಡಿಯಬೇಕು,ನೀವು ಹಣ ಕೊಳ್ಳೆ ಹೊಡೆಯುವುದಕ್ಕೆ ನಾವು ಬಿಡುವುದಿಲ್ಲ ನಮ್ಮ ಗ್ರಾಮ ಅಭಿವೃದ್ಧಿಯಾಗಬೇಕು,ನಮ್ಮ ಗ್ರಾಮದಲ್ಲಿ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ಯಾರೋ ಪುಣ್ಯಾತ್ಮರು ಉಚಿತವಾಗಿ ದೇವಸ್ಥಾನ ನಿರ್ಮಿಸುತ್ತಿದ್ದಾರೆ

ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗ್ರಾಮ ಪಂಚಾಯಿತಿಯವರು ಸ್ಥಳಕ್ಕೆ ಬಂದು ನೋಡಿಲ್ಲ ಏಕಾಏಕಿ ಬಂದು ನಮ್ಮ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯುವುದಕ್ಕೆ ನಿಮಗೆ ಪರ್ಮಿಷನ್ ಕೊಟ್ಟವರು ಯಾರು ಎಂದು ರೊಚ್ಚಿಗೆದ್ದಿದ್ದಾರೆ ಈ ಹಿಂದೆ ಇದ್ದ ಲಿಂಗೇಶ್ ಎಂಬ ಕಾರ್ಯದರ್ಶಿಗಳ ಮೇಲೆ ಬಂಗ್ಲಿ ರಾಮಲಿಂಗಯ್ಯ ಅವರು ಸುಖ ಸುಮ್ಮನೆ ಆರೋಪ ಒರಿಸಿದ್ದಾರೆಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕಾರ್ಯದರ್ಶಿ ಲಿಂಗೇಶ್ ನಾನು ಯಾವುದೇ ಅವ್ಯವಹಾರ ಮಾಡಿಲ್ಲ!

ನಾನುಕಾನೂನಿಗೆ ತಲೆಬಾಗುತ್ತೇನೆ ತಪ್ಪು ಮಾಡಿದ್ದರೆ ಕಾನೂನು ನನಗೆ ಶಿಕ್ಷೆ ವಿಧಿಸಲಿ ಬಂಗಲಿ ರಾಮಲಿಂಗಯ್ಯ ಅವರು ನನ್ನ ಮೇಲೆ ಸುಖ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಮೂರು ವರ್ಷದ ಹಿಂದೆ ಸಂಪೂರ್ಣ ಕೆರೆ ಬತ್ತಿ ಹೋಗಿತ್ತು ಮಾರ್ಕೋನಹಳ್ಳಿ ಜಲಾಶಯದಿಂದ ಕೆರೆಗೆ ನೀರು ಬಿಡಲಾಗಿತ್ತು ಎಂದು ಗ್ರಾಮದ ಜನತೆ ತಿಳಿಸಿದ್ದಾರೆ.

Share with Friends
author avatar
Digital Desk