
ಪೊಲೀಸರ ಭರ್ಜರಿ ಕಾರ್ಯಾಚರಣೆ: ₹2.29 ಕೋಟಿ ಮೌಲ್ಯದ ಜಪ್ತಿ ಮಾಲು ನೈಜ ಮಾಲೀಕರಿಗೆ ಹಸ್ತಾಂತರ..!
ಹಾವೇರಿ: ಕಳ್ಳತನ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ₹2.29 ಕೋಟಿ ಮೌಲ್ಯದ ವಸ್ತುಗಳನ್ನು ಹಾವೇರಿ ಜಿಲ್ಲಾ ಪೊಲೀಸರು ‘ಪ್ರಾಪರ್ಟಿ ರಿಟರ್ನ್ ಪರೇಡ್’ ಮೂಲಕ ನೈಜ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ಎಸ್.ಪಿ. ಯಶೋಧಾ ವಂಟಗೋಡಿ ಅವರ ನೇತೃತ್ವದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ 46 ಪ್ರಕರಣಗಳ ಜಪ್ತಿ ಮಾಲುಗಳನ್ನು ವಾರಸುದಾರರಿಗೆ ವಾಪಸ್ ನೀಡಲಾಯಿತು.
ಕಳ್ಳತನದ ಚಿನ್ನಾಭರಣ, ನಗದು ಹಾಗೂ ಇತರೆ ದುಬಾರಿ ವಸ್ತುಗಳನ್ನು ನೈಜ ಮಾಲೀಕರ ಕೈಗೆ ನೀಡಲಾಯಿತು.ಮತ್ತು
ಕಳ್ಳತನವಾಗಿದ್ದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು.
2026ರಲ್ಲಿ ಪತ್ತೆಯಾದ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿ ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಾವೇರಿ ಪೊಲೀಸರು ಸೈಬರ್ ಮತ್ತು ಕಳ್ಳತನ ತಡೆಗಟ್ಟುವಲ್ಲಿ ಕೂಡ ಸಾಧನೆ ಮಾಡಿದ್ದಾರೆ.
- 2,527 ಮೊಬೈಲ್‌ಗಳನ್ನು ಬ್ಲಾಕ್ ಮಾಡಲಾಗಿದೆ
- 2,014 ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ
- ಸ್ಪೆಷಲ್ ಡ್ರೈವ್‌ನಲ್ಲಿ ಒಂದೇ ಕಾರ್ಯಾಚರಣೆಯಲ್ಲಿ 539 ಮೊಬೈಲ್‌ಗಳ ಪತ್ತೆ
‘ಪ್ರಾಪರ್ಟಿ ರಿಟರ್ನ್ ಪರೇಡ್’ ಮೂಲಕ ವರ್ಷಗಳಿಂದ ಕಳೆದುಹೋದ ತಮ್ಮ ಆಸ್ತಿ ಮರಳಿ ಸಿಕ್ಕಾಗ ಮಾಲೀಕರು ಭಾವುಕರಾದರು. ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರು ಫುಲ್ ಖುಷ್ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಪಿ. ಯಶೋಧಾ ವಂಟಗೋಡಿ ಅವರು, “ಜನರ ಆಸ್ತಿ ರಕ್ಷಣೆ ನಮ್ಮ ಮೊದಲ ಆದ್ಯತೆ. ಕಳ್ಳತನ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ನೈಜ ಮಾಲೀಕರಿಗೆ ಆಸ್ತಿ ವಾಪಸ್ ನೀಡುವ ಕೆಲಸವನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.ಹಾವೇರಿ ಪೊಲೀಸರ ಈ ಮಾನವೀಯ ಮತ್ತು ಜನಪರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
