EntertainmentLatestTop Storiesಸ್ಯಾಂಡಲ್​ವುಡ್-Sandalwood

ಸಿನಿಮಾ ಮಾಡುವುದು ಇಡೀ ಪ್ರಪಂಚದ ವಿರುದ್ಧ ಯುದ್ಧ” – ವದಂತಿಗಳಿಗೆ ಯಶ್ ಖಡಕ್ ಉತ್ತರ

ಬೆಂಗಳೂರು: ಬಹುನಿರೀಕ್ಷಿತ ಆಕ್ಷನ್ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ಯಶ್ ಅವರು ಚಿತ್ರದ ಕುರಿತು ಹರಿದಾಡುತ್ತಿದ್ದ ಹಲವು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರು ನಿರ್ಮಾಣ ಹಂತದಲ್ಲಿ ಸಿನಿಮಾ ಸ್ಥಗಿತಗೊಂಡಿದೆ, ಕೈಬಿಡಲಾಗಿದೆ ಎಂಬ ಸುದ್ದಿಗಳ ಬಗ್ಗೆ ಖಡಕ್ ಆಗಿ ಮಾತನಾಡಿದರು.ದೊಡ್ಡ ಬಜೆಟ್‌ನ ಸಿನಿಮಾ ನಿರ್ಮಾಣ ಹಂತಕ್ಕೆ ಬಂದಾಗಲೆಲ್ಲಾ ಇಂತಹ ವರದಿಗಳು ಸಾಮಾನ್ಯವಾಗಿರುತ್ತವೆ. ಇಂತಹ ವರದಿಗಳ ಮೂಲ ಯಾವುದು? ಎಂದು ಯಶ್ ಪ್ರಶ್ನಿಸಿದರು.

ಇತ್ತೀಚಿನ ದಿನಗಳಲ್ಲಿ ನಾನು ಇದನ್ನು ಹೆಚ್ಚಾಗಿ ನೋಡುತ್ತಿದ್ದೇನೆ. ದೊಡ್ಡ ಸಿನಿಮಾ ಶುರುವಾದಾಗಲೆಲ್ಲಾ, 10ನೇ ದಿನವೋ ಅಥವಾ 20ನೇ ದಿನವೋ ಅದು ನಿಂತುಹೋಗಿದೆ ಎಂಬ ಸುದ್ದಿ ಬರುತ್ತದೆ! ಇವರು ಇಂತಹ ವರದಿಗಳನ್ನು ಎಲ್ಲಿಂದ ಬರೆಯುತ್ತಾರೋ ಗೊತ್ತಿಲ್ಲಎಂದು ಬೇಸರ ವ್ಯಕ್ತಪಡಿಸಿದರು. ಸಿನಿಮಾ ನಿರ್ಮಾಣದ ಸವಾಲುಗಳ ಬಗ್ಗೆ ಮಾತನಾಡಿದ ಯಶ್, ನಿರ್ಮಾಪಕರು, ನಟರು ಅಥವಾ ನಿರ್ದೇಶಕರಿಗೆ ಇದು ಸುಲಭದ ಕೆಲಸವಲ್ಲ. ಮೊದಲನೆಯದಾಗಿ, ಸಿನಿಮಾ ಮಾಡುವುದು ಎಂದರೆ ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ! ಎಂದು ಹೇಳಿದರು.

ಸಿನಿಮಾ ಮಾಡುವುದು ಇಡೀ ಪ್ರಪಂಚದ ವಿರುದ್ಧ ಯುದ್ಧ ವದಂತಿಗಳಿಗೆ ಯಶ್ ಖಡಕ್ ಉತ್ತರ


ಸಿನಿಮಾ ನಿರ್ಮಾಣದಲ್ಲಿ ನಟರ ಲಭ್ಯತೆ ಮತ್ತು ಶೆಡ್ಯೂಲ್ ನಂತಹ ಅನೇಕ ಅನಿಶ್ಚಿತತೆಗಳು ಇರುತ್ತವೆ. ಆ ದಿನ ನಟನ ಮನಸ್ಥಿತಿ ಹೇಗಿರುತ್ತದೆ ಅಥವಾ ಅವರಿಗೆ ಸಾಕಷ್ಟು ಡೇಟ್ಸ್ ಲಭ್ಯವಿರುತ್ತವೆಯೇ ಎಂಬುದು ನಮಗೆ ತಿಳಿದಿರುವುದಿಲ್ಲ. ಹೀಗೆ ಅನೇಕ ಸಮಸ್ಯೆಗಳು ಇರುತ್ತವೆ` ಎಂದು ಅವರು ವಿವರಿಸಿದರು.

ಟಾಕ್ಸಿಕ್ ಚಿತ್ರದ ನಿರ್ಮಾಣದ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳ ನಡುವೆಯೂ ಚಿತ್ರದ ಪರವಾಗಿ ದೃಢವಾಗಿ ನಿಂತಿದ್ದಕ್ಕಾಗಿ ನಿರ್ಮಾಪಕ ವೆಂಕಟ್ ಕೆ. ನಾರಾಯಣ್ ಅವರನ್ನು ಯಶ್ ವಿಶೇಷವಾಗಿ ಶ್ಲಾಘಿಸಿದರು. ನನ್ನ ಪಾಲುದಾರ ಮತ್ತು ನಿರ್ಮಾಪಕರು ನಮ್ಮನ್ನು ಎಂದಿಗೂ ಪ್ರಶ್ನಿಸಲಿಲ್ಲ. ಅವರು ಬಂಡೆಯಂತೆ ನಮ್ಮ ಜೊತೆ ನಿಂತರು ಎಂದು ತಿಳಿಸಿದರು.ಚಿತ್ರದ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಯಶ್, ಚಿತ್ರತಂಡವು 200 ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ಪ್ರಮುಖ ತಾರಾಗಣದೊಂದಿಗೆ ಚಿತ್ರದ ಎರಡು ಆವೃತ್ತಿಗಳ ಮೇಲೆ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ನಾವು ಎರಡು ವರ್ಷಗಳ ಹಿಂದೆ ಆಗಸ್ಟ್ 8 ರಂದು ಕೆಲಸ ಆರಂಭಿಸಿದೆವು. ಈ ಎಲ್ಲಾ ಪ್ರತಿಭಾವಂತ ಮತ್ತು ಅದ್ಭುತ ನಟರೊಂದಿಗೆ ನಾವು ಎರಡು ಆವೃತ್ತಿಗಳನ್ನು ಚಿತ್ರೀಕರಿಸಿದ್ದೇವೆ. ಅವರು ತಮ್ಮ ಸಮಯ ಮತ್ತು ಎಲ್ಲವನ್ನೂ ನೀಡಿದ್ದಾರೆ. ಅವರು ಅಷ್ಟೊಂದು ಬದ್ಧತೆಯಿಂದ ಕೆಲಸ ಮಾಡಿದ್ದಾರೆಎಂದು ಯಶ್ ಹೆಮ್ಮೆಯಿಂದ ಹೇಳಿದರು.ಗೀತು ಮೋಹನ್ ದಾಸ್ ನಿರ್ದೇಶನದಟಾಕ್ಸಿಕ್` ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಸೇರಿದಂತೆ ದೊಡ್ಡ ತಾರಾಗಣವಿದೆ. ಇದು ಪ್ಯಾನ್-ಇಂಡಿಯಾ ಲೆವೆಲ್‌ನ ಫ್ಯಾಂಟಸಿ ಆಕ್ಷನ್ ಸಿನಿಮಾ ಆಗಿದ್ದು, 2026ರಲ್ಲಿ ಬಿಡುಗಡೆಯಾಗಲಿದೆ.ಟ್ರೈಲರ್ ಬಿಡುಗಡೆ ಬಳಿಕ ಸಿನಿಮಾ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

Share with Friends
author avatar
Digital Desk