BlogEntertainmentLatest

ಬಳ್ಳಾರಿ ಜೈಲಲ್ಲಿ ದಾಸನಿಗೆ ಟಿವಿ ‘ದರ್ಶನ’ ಭಾಗ್ಯ

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಗೆ ಟಿವಿ ಭಾಗ್ಯ ಸಿಕ್ಕಿದೆ. ಜೈಲಿನ ಅಧಿಕಾರಿಗಳು ದರ್ಶನ್ ಬೇಡಿಕೆಯನ್ನು ಈಡೇರಿಸಿದ್ದಾರೆ. ಕಳೆದ ಐದು ದಿನಗಳ ಹಿಂದೆ ಟಿವಿಗೆ ಆರೋಪಿ ದರ್ಶನ್ ಬೇಡಿಕೆ ಇಟ್ಟಿದ್ದರು. ಐದು ದಿನಗಳ ನಂತರ ಬೆಳಿಗ್ಗೆ ದರ್ಶನ್ ಇರುವ ಸೆಲ್‌ ಗೆ ಟಿವಿ ಅಳವಡಿಸಲಾಗಿದೆ.

ಜಾರ್ಜ್‌ ಶೀಟ್‌ ಸಲ್ಲಿಕೆ ಸೇರಿದಂತೆ ಹೊರ ಜಗತ್ತಿನ ವಿಷಯ ತಿಳಿದುಕೊಳ್ಳವ ಕುತೂಹಲ ಇರುವ ಹಿನ್ನೆಲೆಯಲ್ಲಿ ದರ್ಶನ್ ಟಿವಿ ಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜೈಲು ನಿಯಮದ ಪ್ರಕಾರ ಟಿವಿ ನೀಡಲಾಗಿದೆ ಎನ್ನಲಾಗಿದೆ.

ಟಿವಿ ರಿಪೇರಿ ಇದ್ದ ಹಿನ್ನೆಲೆ ಇಲ್ಲಿಯವರೆಗೂ ನೀಡಿರಲಿಲ್ಲ. ಆದರೆ, ಇಂದು ದರ್ಶನ್ ಇರುವ ಸೆಲ್‌ ಗೆ ಟಿವಿ ನೀಡಲಾಗಿದೆ. ಹೈಯರ್ ಕಂಪನಿಯ 32 ಇಂಚಿನ ಟಿವಿಯನ್ನು ದರ್ಶನ್ ಇರುವ ಸೆಲ್‌ ಗೆ ನೀಡಲಾಗಿದೆ.

Share with Friends
author avatar
News Desk