Crime NewsEntertainmentLatestರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ಕೊಲೆ? ನಟ ದರ್ಶನ್ ಬಂಧನ

ರೇಣುಕಾ ಸ್ವಾಮಿ ಎಂಬವರು ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ಕೊಲೆ ಆಗಿದ್ದರು. ಇದೀಗ ಪ್ರಕರಣಲ್ಲೆ ಟ್ವಿಸ್ಟ್‌ ಸಿಕ್ಕಿದ್ದು, ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಸೂಚನೆ ಮೇರೆಗೆ ಈ ಕೊಲೆ ನಡೆದಿದೆ ಎನ್ನಲಾಗಿದೆ.

ಸದ್ಯ ಈಗ ದರ್ಶನ್‌ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಅರೆಸ್ಟ್‌ ಆಗಿದ್ದಾರೆ. ರೇಣುಕಾ ಸ್ವಾಮಿ ಎಂಬವರು ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ್ದಕ್ಕೆ ಕೊಲೆ ಮಾಡಲಾಗಿದೆ.

https://youtu.be/xSLCGueQyE8?si=qgnMjTxqr1TcM5Zd

ಪ್ರರಂಭಿಕವಾಗಿ ಇದು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಇದೀಗ ಅದು ಕೊಲೆ ಎಂಬುದು ಗೊತ್ತಾಗಿದೆ. ರೇಣುಕಾ ಸ್ವಾಮಿ ಮೂಲತಃ ಚಿತ್ರದುರ್ಗದವರು. ಇತನನ್ನು ಚಿತ್ರದುರ್ಗದಿಂದ ಕರೆತಂದು ಕಾಮಾಕ್ಷಿ ಪಾಳ್ಯದಲ್ಲಿ ಕೊಲೆ ಮಾಡಲಾಗಿದೆ. ಮೊರಿಯಲ್ಲಿ ಮೃತದೇಃ ಪತ್ತೆಯಾಗಿತ್ತು.

https://youtu.be/V2xj2tozX58?si=WFltePtXlfFpIGfT

ಪ್ರಕರಣಕ್ಕೆ ಸಂಬಂಧಿಸಿದಂತೆ ಇವರೆಗೆ 10 ಮಂದಿಯನ್ನ ಆರೆಸ್ಟ್‌ ಮಾಡಲಾಗಿದೆ.

ಪವಿತ್ರಾ ಗೌಡ ಯಾರು?

ಪವಿತ್ರಾ ಗೌಡ ಮಾಡೆಲ್‌‌‌ ಕಮ್ ನಟಿ. ಅವರು ಛತ್ರಿಗಳು ಸಾರ್ ಛತ್ರಿಗಳು ಸಾರ್, ಅಗಮ್ಯ, ಸಾಗುವ ದಾರಿ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರೀತಿ ಕಿತಾಬು ಎಂಬ ಚಿತ್ರ ಅವರಿ ಗೆ ಖ್ಯಾತಿ ತಂದುಕೊಟ್ಟ ಸಿನಿಮಾ ಇದಾಗಿದೆ. ಅವರು ಫ್ಯಾಶನ್ ಡಿಸೈನರ್ ಸಹ ಆಗಿದ್ದು, ಆರ್ ಆರ್ ನಗರದಲ್ಲಿ ರೆಡ್ ಕಾರ್ಪೆಟ್ ಹೆಸರಿನಲ್ಲಿ ಬೋಟಿಕ್ ನಡೆಸುತ್ತಿದ್ದಾರೆ

ಕಳೆದ ೧೦ ವರ್ಷಗಳಿಂದ ದರ್ಶನ್ ಜೊತೆ ಸ್ನೇಹ ಸಂಬಂಧದಲ್ಲಿ ಇದ್ದಾರೆ ಇದೇ ವಿಚಾರವಾಗಿ ದರ್ಶನ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಪವಿತ್ರಾ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಆಗಾಗ ಜಗಳ ಆಗಿದೆ. ಪರಸ್ಪರ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಜಗಳ ಮಾಡಿಕೊಂಡಿದ್ದರು

Share with Friends
author avatar
News Desk