LatestTop Storiesಬೆಂಗಳೂರು-Bengaluru

ಕಿಡ್ನಾಪ್ ನಾಟಕ; ತಂದೆಯಿಂದ 90 ಲಕ್ಷಕ್ಕೆ ಬೇಡಿಕೆ

ಬೆಂಗಳೂರು.ಅ.1- ತಂದೆಯಿಂದ 90 ಲಕ್ಷ ಹಣ ಪಡೆಯಲು ತನ್ನದೇ ಅಪಹರಣದ ನಾಟಕವಾಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ.

ಮನೀಷ್ ಪಟೇಲ್ ಎಂಬಾತ ತನ್ನ ತಂದೆ ಮನೋಹರ್‌ಗೆ ಗದಗದಲ್ಲಿ ಹಣದ ವ್ಯವಹಾರವಿದೆ ಎಂದು ತಿಳಿಸಿದ್ದ. ಬಳಿಕ ಸ್ನೇಹಿತರ ಸಹಾಯದಿಂದ ಮನೀಷ್‌ನನ್ನು ಅಪಹರಿಸಲಾಗಿದೆ ಎಂದು ತಂದೆಗೆ ಬೆದರಿಕೆ ಕರೆ ಮಾಡಿಸಿ, ಆತನ ಬಿಡುಗಡೆಗೆ 90 ಲಕ್ಷ ನೀಡುವಂತೆ ಬೇಡಿಕೆ ಇಡಲಾಗಿತ್ತು.

ಬೆದರಿಕೆ ಕರೆಗಳಿಂದ ಆತಂಕಗೊಂಡ ಡ ಮನೋಹರ್ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಮನೀಷ್‌ನ ಮೊಬೈಲ್ ಸೇರಿದಂತೆ ಲಭ್ಯವಿದ್ದ ಮಾಹಿತಿಯ ಆಧಾರದ ಮೇಲೆ ಆತನಿಗಾಗಿ ಹುಡುಕಾಟ ನಡೆಸಿದರು.

ಈ ವೇಳೆ ಮನೀಷ್ ಹಾಸನದ ಮನೆಯೊಂದರಲ್ಲಿ ಸ್ನೇಹಿತರೊಂದಿಗೆ ಇರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ವಿಚಾರಣೆ ವೇಳೆ ಅಪಹರಣದ ನಾಟಕದ ಬಗ್ಗೆ ಮಾಹಿತಿ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆಯಿಂದ ಹಣ ಪಡೆಯುವ ಉದ್ದೇಶದಿಂದ ಸ್ನೇಹಿತರೊಂದಿಗೆ ಸೇರಿಕೊಂಡು ಅಪಹರಣದ ನಾಟಕ ರೂಪಿಸಿದ್ದ ಆರೋಪದ ಮೇರೆಗೆ ಮನೀಷ್ ಹಾಗೂ ಆತನ ಸ್ನೇಹಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share with Friends
author avatar
Digital Desk