
“ಸಚಿವ ಸ್ಥಾನ ಸಿಗದಕ್ಕೆ ಅಸಮಾಧಾನ ಸಹಜ” – ಸಚಿವ ಅಜಯ್ ಧರಂ ಸಿಂಗ್
ರಾಯಚೂರು: ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಚಿವ ಅಜಯ್ ಧರಂ ಸಿಂಗ್ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದರು. ಸಚಿವ ಸ್ಥಾನ ತಪ್ಪಿದ ಶಾಸಕರ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಸಚಿವ ಸ್ಥಾನ ತಪ್ಪಿದ ಶಾಸಕರು ಅಸಮಾಧಾನಗೊಳ್ಳೋದು ಸಹಜ. ಬರೀ ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಅಲ್ಲ, ದೇಶದಲ್ಲಿ ಎಲ್ಲಾಕಡೆ ಇದೆಎಂದು ಸಚಿವ ಅಜಯ್ ಧರಂ ಸಿಂಗ್ ಹೇಳಿದರು.ಧರಂ ಸಿಂಗ್ ಮುಖ್ಯಮಂತ್ರಿ ಆದಾಗಿನಿಂದ 15% ಕ್ಯಾಪ್ ಅಂತ ಬಂದಿದೆ. ಪಕ್ಷದಲ್ಲಿ ಬಹುತೇಕರು ಅರ್ಹರಿದ್ದಾರೆ. ಹಾಗಾಗಿ ಇದು ಸಹಜ ಎಂದು ತಿಳಿಸಿದರು.
ಆದರೂ ಈ ಬಾರಿ ಯುವಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಾಂಬಿನೇಷನ್ ಆಫ್ ಎಕ್ಸ್ಪೀರಿಯನ್ಸ್ ಅಂಡ್ ಯೂತ್ ಅಡಿಯಲ್ಲಿ ಕ್ಯಾಬಿನೆಟ್ನಲ್ಲಿ ಸ್ಥಾನಗಳನ್ನ ನೀಡಿದ್ದಾರೆಎಂದು ಅವರು ಹೇಳಿದರು.ಬಹಳ ಜನ ಅರ್ಹರಿದ್ದಾರೆ. ಆದರೂ ಎಲ್ಲರೂ ತಾಳ್ಮೆಯಿಂದ ಇರಬೇಕು ಅಂತ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.
ತಮ್ಮ ಉದಾಹರಣೆ ನೀಡಿದ ಅಜಯ್ ಸಿಂಗ್, ನಮ್ಮ ಹಿರಿಯರಾದ ಡಿ.ಕೆ ಶಿವಕುಮಾರ್ ಮತ್ತು ಪರಮೇಶ್ವರ್ ಅವರಿಗೂ ಬಹುಕಾಲ ಅವಕಾಶಗಳಿರಲಿಲ್ಲ. ಅವರು ತಾಳ್ಮೆಯಿಂದ ಇದ್ದರು. ನನಗೂ 2018 ರಲ್ಲಿ ಹಾಗೂ 2023 ರಲ್ಲಿ ಅವಕಾಶ ವಂಚಿತನಾಗಿದ್ದೆ. ಈಗ ಅವಕಾಶ ಸಿಕ್ಕಿದೆ ಎಂದು ಹೇಳಿದರು.ಮುಂದೆಯೂ ಎಲ್ಲಾ ನಾಯಕರಿಗೆ ಅವಕಾಶ ಸಿಗಲಿದೆ. ತಾಳ್ಮೆಯಿಂದ ಇರಬೇಕು. ಖಂಡಿತವಾಗಿ ಅಸಮಾಧಾನ ಶಮನವಾಗುತ್ತದೆ ಎಂದು ಭರವಸೆ ನೀಡಿದರು.
ಈಗಾಗಲೇ ಅನೇಕ ಶಾಸಕರು ತಮ್ಮ ರಾಜಿನಾಮೆಯನ್ನು ವಾಪಸ್ ಪಡೆದಿದ್ದಾರೆ. ಈ ಸಮಸ್ಯೆ ಕರ್ನಾಟಕ ಮತ್ತು ಕಾಂಗ್ರೆಸ್ನಲ್ಲಿ ಮಾತ್ರವಲ್ಲ, ದೇಶದ ಎಲ್ಲಾಕಡೆಯೂ ಇದೆ ಎಂದು ಅಜಯ್ ಸಿಂಗ್ ಹೇಳಿದರು.ನಮ್ಮ ವರಿಷ್ಠರು ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.ಕೆಕೆಆರ್ಡಿಬಿ ಅಧ್ಯಕ್ಷ ಸ್ಥಾನದ ಕುರಿತು ಪ್ರಶ್ನಿಸಿದಾಗ,ಅದು ಪಕ್ಷದ ವರಿಷ್ಠರಿಗೆ ಬಿಟ್ಟದ್ದು. ಅವರು ತೀರ್ಮಾನ ಮಾಡುತ್ತಾರೆ ಎಂದು ಸಚಿವ ಅಜಯ್ ಧರಂ ಸಿಂಗ್ ಸ್ಪಷ್ಟಪಡಿಸಿದರು.
