
ನಾಡಗೀತೆಯಲ್ಲಿ ‘ಪಾರಸಿಕ ಜೈನರುದ್ಯಾನ’ ಎಂಬ ಸಾಲಿನ ಬದಲಾಗಿ ‘ಬೌದ್ಧರುದ್ಯಾನ’ ಎಂದು ಸೇರಿಸುವ ಕುರಿತು ಶಿಫಾರಸು ಮಾಡಲಾಗಿದೆ..!
ಬೆಂಗಳೂರು: ನಾಡಗೀತೆಯಾದ ರಾಷ್ಟಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆಯಲ್ಲಿ…’ ಬೌದ್ಧ ಧರ್ಮದ ಪ್ರಾತಿನಿಧ್ಯವನ್ನು ಒಳಗೊಂಡ ‘ಬೌದ್ಧರುದ್ಯಾನ’ ಎಂಬ ಪದವನ್ನು ಸೇರಿಸಲು ಡಾ. ಪುರುಷೋತ್ತಮ ಸರ್ಕಾರಕ್ಕೆ ಬಿಳಿಮಲೆ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಮಹತ್ವದ ಶಿಫಾರಸು ಮಾಡಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನದಂತೆ ರಚನೆಯಾಗಿದ್ದ ಈ ಸಮಿತಿಯು, ನಾಡಿನ ಬಹುತ್ವವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ನಾಡಗೀತೆಯ ಕೊನೇ ಚರಣದಲ್ಲಿ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ…’ ಇರುವ ಕಡೆ ‘ಜೈನ ಬೌದ್ಧರುದ್ಯಾನ’ ಎಂದು ಸೇರ್ಪಡೆ ಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಗೀತೆಯ ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಮರುಸಂಯೋಜಿಸಲಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ
