LatestLife Style | ಜೀವನಶೈಲಿಬೆಂಗಳೂರು-Bengaluruರಾಜ್ಯ-Karnataka

ನೀವು ಶವರ್ಮ ಪ್ರೀಯರೇ ಹಾಗಾದರೇ ನೋಡಲೇಬೇಕಾದ ಸುದ್ದಿ

-ಮಸಾಲಪುರಿ, ಪಾನಿಪೂರಿಯ ಕೆಮಿಕಲ್ ಸಾಸ್ ಬ್ಯಾನ್ ಸ್ದುದ್ದಿ ಬೆನ್ನಲ್ಲೇ ಶವರ್ಮಗೂ ಸಂಕಷ್ಟ…!

ಬೆಂಗಳೂರು: ರಾಜ್ಯದಲ್ಲಿ ಗೋಬಿ, ಕಬಾಬ್ ಕೃತಕ ಬಣ್ಣ ಮಸಾಲ- ಪಾನಿಪೂರಿಯ ಕೆಮಿಕಲ್ ಸಾಸ್ ಬ್ಯಾನ್‌ (Ban) ಬಳಿಕ ಇದೀಗ ಶವರ್ಮಗೂ (Shawarma) ಸಂಕಷ್ಟ ಎದುರಾಗಿದೆ.

ರಾಜ್ಯದಲ್ಲಿ ಗೋಬಿ, ಕಬಾಬ್ ಕೃತಕ ಬಣ್ಣ ಮಸಾಲ- ಪಾನಿಪೂರಿಯ ಕೆಮಿಕಲ್ ಸಾಸ್ ಬಳಿಕ ಶವರ್ಮ ಸರದಿಯಾಗಿದೆ. ಆರೋಗ್ಯದ ದೃಷ್ಟಿಯಿಂದ ಶವರ್ಮ ಬ್ಯಾನ್‌ಗೆ ಪ್ಲಾನ್‌ ಮಾಡಿಲಾಗಿದೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಕಾರು ಡಿಕ್ಕಿ-ಇಬ್ಬರು ಸಾವು, ನಾಲ್ವರಿಗೆ ಗಾಯ

ರಾಜ್ಯದ ಮೂಲೆ ಮೂಲೆಯಿಂದ ಶವರ್ಮಾ ಮಾದರಿಯನ್ನ FSSAI ಪರೀಕ್ಷಿಸುತ್ತಿದ್ದು, ಇವರೆಗೂ ರಾಜ್ಯಾದಾದ್ಯಂತ 17 ಶವರ್ಮಾ ಮಾದರಿಯನ್ನ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 8 ಮಾದರಿಯಲ್ಲಿ ಬ್ಯಾಕ್ಟೀರಿಯಾ ಈಸ್ಟ್ ಪತ್ತೆಯಾಗಿದೆ.

https://youtu.be/xQiZESZuqCc?si=VMnB0EQs7dqgma8u

ಹೋಟೆಗಳಲ್ಲಿ ಅಹಾರವನ್ನ ಸರಿಯಾದ ರೀತಿಯಲ್ಲಿ ತಯಾರಿಸದ ಕಾರಣ ಬಾಕ್ಟೀರಿಯಾಗಳು ಇರುವ ಆಂಶ ಪತ್ತೆಯಾಗಿದೆ. ಈಗಾಗಲೇ ಅಸುರಕ್ಷಿತ ಶವರ್ಮಾ ನೀಡಿರುವ ಅಂಗಡಿಗಳ ಮೇಲೆ ಕ್ರಮವಹಿಸಲಾಗಿದೆ.

ಜೊತೆಗೆ ಇನ್ಮುಂದೆ ಎಲ್ಲಾ ಶವರ್ಮಾ ಮಾರಾಟಗಾರರು FSSAI ನೊಂದಿಗೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: 17 ವರ್ಷದ ಬಳಿಕ ಟಿ20 ವಿಶ್ವಕಪ್ ಗೆದ್ದ ಭಾರತಕ್ಕೆ ಶುಭ ಕೋರಿದ ರಾಹುಲ್​ ಗಾಂಧಿ

Share with Friends
author avatar
News Desk