LatestTop Storiesತುಮಕೂರು-Tumakuru

ತುಮಕೂರಿಗೆ ಉಚಿತ ಆಸ್ಪತ್ರೆ & ಕಾಲೇಜು! ಮಧುಸೂದನ ಸಾಯಿ ಅವರಿಗೆ ಮನವಿ

ತುಮಕೂರಿನಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿರುವ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ್ ಹಾಲಪ್ಪ ಅವರ ನಿವಾಸಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಗಮಿಸಿದ್ದರು.

ಈ ಸೌಹಾರ್ದಯುತ ಭೇಟಿಯ ವೇಳೆ ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.

​ಮುಖ್ಯವಾಗಿ, ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಗುಣಮಟ್ಟದ ಉಚಿತ ವೈದ್ಯಕೀಯ ಸೇವೆ ಸಿಗುವಂತಾಗಲು ಆಧುನಿಕ ಸೌಲಭ್ಯವುಳ್ಳ ಉಚಿತ ಆಸ್ಪತ್ರೆಯನ್ನು ನಿರ್ಮಿಸಿಕೊಡಬೇಕೆಂದು ಮುರುಳೀಧರ್ ಹಾಲಪ್ಪ ಅವರು ಸದ್ಗುರುಗಳಲ್ಲಿ ವಿನಂತಿಸಿಕೊಂಡರು.

​ಅಷ್ಟೇ ಅಲ್ಲದೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಪದವಿ ಪೂರ್ವ (PU) ಶಿಕ್ಷಣವೂ ಸೇರಿದಂತೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಉಚಿತ ಕಾಲೇಜು ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದಾರೆ.

Share with Friends
author avatar
Digital Desk