Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ನನ್ನ ಮನೆ ಆರ್.ಅಶೋಕ್‌ಗೆ ಬಿಟ್ಟುಕೊಡ್ತೀನಿ: ಡಿಕೆಶಿ ಟಾಂಗ್

ಬೆಂಗಳೂರು: ಆರ್.ಅಶೋಕ್ ಗೆ (R Ashok) ನನ್ನ ಮನೆ ಬಿಟ್ಟುಕೊಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಟಾಂಗ್‌ ನೀಡಿದ್ದಾರೆ.

ಆರ್. ಅಶೋಕ್ ಗೆ ಸರ್ಕಾರಿ ಬಂಗಲೆ ಕೊಡದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅಶೋಕ್‌ಗೆ ಮನೆ ಕೊಡಿಸೋಣ, ನನ್ನನ್ನೇ ಕೇಳಿದ್ರೆ ನಾನೇ ಮನೆ ಕೊಡಿಸ್ತಿದ್ದೆ ಅಂತಾ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬೋಳಿಯಾರ್ ಚೂರಿ ಇರಿತ ಪ್ರಕರಣ – ವಿಜಯೋತ್ಸವ ಆಚರಿಸಿದ್ದ ಐವರ ಮೇಲೆ ಎಫ್‍ಐಆರ್

https://youtu.be/FrrnBHNMxDs?si=Z2mU9TV7_N6W-lP-

ಹಳೆ ನೆನಪಿಗಾಗಿ ನಾನು ಆ ಸರ್ಕಾರು ಮನೆ ತಗೊಂಡೆ. ಹಿಂದೆ ಬಂಗಾರಪ್ಪ ನವರು ಆ ಮನೆಯಲ್ಲಿ ಇದ್ದರು. ನಾನು ವಿದ್ಯಾರ್ಥಿ ಮುಖಂಡನಾಗಿದ್ದಾಗ ಆ ಮರದ ಕೆಳಗೆ ಹೋಗಿ ಕೂರ್ತಿದ್ದೆ. ಆ ನೆನಪಿಗಾಗಿ ನಾನು ಆ ಮನೆ ತಗೊಂಡಿದ್ದೇನೆ. ಈವಾಗ್ಲೂ ನನ್ನನ್ನು ಅಶೋಕ್ ಕೇಳಲಿ, ಮನೆ ಬೇಕಿದ್ರೆ ಬಿಟ್ಟು ಕೊಡ್ತೀನಿ ಎಂದಿದ್ದಾರೆ.ಇದನ್ನೂ ಓದಿ: ಪ್ರವಾಸಕ್ಕೆಂದು ಬೀಚ್‌ಗೆ ಬಂದಿದ್ದ ಅಂದ್ರ ಮೂಲದ ಮಹಿಳೆ ನೀರು ಪಾಲು

https://youtu.be/y8xFHjYVN3c?si=ZmJIipseKHGkwe0o

ಆ ಮನೆಗೆ ಹೋದ್ರೆ ಸಿಎಂ ಆಗ್ತಾರೆಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅವರಿಗೆ ಒಳ್ಳೆಯದಾಗಲಿ.ಹಿಂದೆ ನನ್ನ ಕ್ಷೇತ್ರಕ್ಕೆ ಬಂದು ಸೋತಿದ್ದರು. ಈಗ ನಾನಿರುವ ಮನೆಗೆ ಬರಲಿ, ಬಿಡ್ತೀನಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಯಾವ ಕಾರಣ ಕೊಲೆ ನಡೆದಿದೆ ಎಂದು ಇನ್ನೂ ತನಿಖೆ ಬಳಿಕ ತಿಳಿಯಬೇಕಿದೆ: ಪರಮೇಶ್ವರ್

Share with Friends
author avatar
News Desk