
ಸ್ವಿಗ್ಗಿ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರ ಸಂಘ..!
ಬೆಂಗಳೂರು: ಜನಪ್ರಿಯ ಫುಡ್ ಡೆಲಿವರಿ ಆಪ್ ಸ್ವಿಗ್ಗಿ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೋಟೆಲ್‌ಗಳಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ತುರ್ತು ಸಭೆ ಕರೆಯಲಾಗಿದೆ.
ಸ್ವಿಗ್ಗಿ ಆಪ್ ಹೋಟೆಲ್ ಮಾಲೀಕರಿಗೆ ಲೂಟಿ ಮಾಡುತ್ತಿದೆ ಎಂದು ಸಂಘದ ಪದಾಧಿಕಾರಿಗಳು ದೂರಿದ್ದಾರೆ. ಆಪ್‌ನಲ್ಲಿ ಒಂದರ ಮೇಲೊಂದರಂತೆ ಆಫರ್‌ಗಳನ್ನು ನೀಡಿ ಹೋಟೆಲ್‌ಗಳಿಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರೀ ನಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

“ಒಂದು ಪ್ಲೇಟ್ ಇಡ್ಲಿ ತಗೊಂಡ್ರೆ ಮತ್ತೊಂದು ಫ್ರೀ” ಎಂಬಂತಹ ಆಫರ್‌ಗಳನ್ನು ಸ್ವಿಗ್ಗಿ ತಾನಾಗಿಯೇ ನೀಡುತ್ತದೆ. ಆದರೆ ಆಫರ್‌ನ ಡಿಸ್ಕೌಂಟ್ ಹಣವನ್ನು ಹೋಟೆಲ್‌ಗಳಿಗೆ ನೀಡುವುದಿಲ್ಲ. ಒಂದೇ ಊಟದ ಹಣ ಮಾತ್ರ ಹೋಟೆಲ್‌ಗೆ ಬರುತ್ತದೆ.
ಗ್ರಾಹಕರು ಆರ್ಡರ್ ಕ್ಯಾನ್ಸಲ್ ಮಾಡಿದರೆ ಆ ಊಟ ವಾಪಸ್ ಹೋಟೆಲ್‌ಗೆ ಬರುವುದಿಲ್ಲ. ಕ್ಯಾನ್ಸಲ್ ಆದ ಆಹಾರವನ್ನು ಡೆಲಿವರಿ ಬಾಯ್ಸ್‌ಗಳೇ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಹೋಟೆಲ್‌ಗಳಿಗೆ ನೇರ ನಷ್ಟ.ಆರ್ಡರ್ ಸ್ವೀಕರಿಸಿ ಆಹಾರ ಕಳುಹಿಸಿಕೊಟ್ಟರೂ ಹೋಟೆಲ್‌ಗಳಿಗೆ ಸರಿಯಾದ ಹಣ ಸರಿಯಾದ ಸಮಯಕ್ಕೆ ಜಮಾ ಆಗುತ್ತಿಲ್ಲ.
ಆಪ್‌ನಲ್ಲಿ ಯಾವ ಆಫರ್ ಇದೆ, ಎಷ್ಟು ಡಿಸ್ಕೌಂಟ್ ಹೋಗುತ್ತಿದೆ ಎಂಬುದರ ಬಗ್ಗೆ ಹೋಟೆಲ್‌ಗಳಿಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.ಈ ಎಲ್ಲಾ ಕಾರಣಗಳಿಂದ ಬೆಂಗಳೂರಿನ ಹಲವು ಹೋಟೆಲ್‌ಗಳಿಗೆ ಪ್ರತಿದಿನ ಸಾಕಷ್ಟು ನಷ್ಟವಾಗುತ್ತಿದೆ ಎಂದು ಹೋಟೆಲ್ ಮಾಲೀಕರ ಸಂಘ ಹೇಳಿದೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಸಭೆ ನಡೆಯಲಿದೆ. ಸ್ವಿಗ್ಗಿ ತನ್ನ ನೀತಿಗಳನ್ನು ಬದಲಿಸದಿದ್ದರೆ ಆಪ್ ಬಂದ್ ಮಾಡಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಘದ ನಾಯಕರು ಎಚ್ಚರಿಕೆ ನೀಡಿದ್ದಾರೆ.
