
ಬೆಳಗಾವಿಯಲ್ಲಿ ಅಗ್ನಿ ದುರಂತಕ್ಕೆ ನಾಲ್ವರ ಸಾ*- ಕಮೀಷನರ್ ಪ್ರಕಾಶ್ ನಿಕ್ಕಂ ಸ್ಥಳಕ್ಕೆ ಭೇಟಿ
ಬೆಳಗಾವಿ, ಸೆ15 :ಅಗ್ನಿ ದುರಂತಕ್ಕೆ ನಾಲ್ವರು ಸಾವನ್ನಪಿಯಿರುವ ಘಟನೆ ಬೆಳಗಾವಿಯಲ್ಲಿ ಕಂಡು ಬಂಡಿದ್ದು. ಸ್ಥಳಕ್ಕೆ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ಬೆಳಗಾವಿಯಲ್ಲಿ ಮಧ್ಯರಾತ್ರಿ 2.30ಕ್ಕೆ ಚವ್ಹಾಣ್ ಗಲ್ಲಿಯ ಪಕ್ಕ ಡೋರ್ ಗಲ್ಲಿಈ ಅಗ್ನಿ ಅವಘಡ ನಡೆಡಿದ್ದು ಪರಿಶೀಲನೆಗೆ ಪ್ರಕಾಶ್ ನಿಕ್ಕಂ ಭೇಟಿನೀಡಿದ್ದಾರೆ..
ಈ ಘಟನೆಯಲ್ಲಿ ನಾಲ್ಕು ಜನ ಮಹಿಳೆಯರು ಸಾವನ್ನಪ್ಪಿದ್ದು,ತಂದೆ ಗಜಾನನಗೆ ಎಂಬತ್ತು ಪರ್ಸಂಟ್ ಮಗ ರೋಷನ್ ಗೆ ನಲವತ್ತು ಪರ್ಸಂಟ್ ಸುಟ್ಟ ಗಾಯವಾಗಿದೆ ಎಂಬುದು ಕಂಡು ಬಂದಿದೆ.
ಹಾಗೂ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಮತ್ತು ತಂದೆ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.ಇದು ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ದಿಂದ ನಡೆದ ಘಟನೆ ಎಂದು ಪರಿಗಣಿಸಲಾಗಿದೆ.
ಸ್ಥಳಕ್ಕೆ ಈಗಾಗಲೇ ಎಫ್ಎಸ್‌ಎಲ್ ಮತ್ತು ಹೆಸ್ಕಾಂ ಸಿಬ್ಬಂದಿ ಆಗಮಿಸಿದ್ದು. ಎಫ್ಎಸ್‌ಎಲ್ ಮತ್ತು ಹೆಸ್ಕಾಂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳ ಪರಿಶೀಲನೆ ನಡೆಸಿದ ಕಮಿಷನರ್.ಬಳಿಕ ಮಾಧ್ಯಮಗಳಿಗೆ ಪೊಲೀಸ್ ಕಮಿಷನರ್ ನಿಕ್ಕಂ ಹೇಳಿಕೆ ನೀಡಿದ್ದಾರೆ
