Top Storiesಬೆಂಗಳೂರು-Bengaluruರಾಜ್ಯ-Karnataka

ಚಿನ್ನಕ್ಕೆ ಕಾಂಪಿಟೇಷನ್ ಕೊಡಿತ್ತಿದೆ ಮೊಟ್ಟೆ ಬೆಲೆ..!

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ಚಿನ್ನಕ್ಕೆ ಕಾಂಪಿಟೇಷನ್ ಕೊಡುವಂತೆ ಮೊಟ್ಟೆ ಬೆಲೆ ಗಗನಕ್ಕೇರಿದೆ. ಸದ್ಯ ಸಿಲಿಕಾನ್ ಸಿಟಿಯ ಚಿಲ್ಲರೆ ಅಂಗಡಿಗಳಲ್ಲಿ ಒಂದು ಮೊಟ್ಟೆಯ ಬೆಲೆ ಬರೋಬ್ಬರಿ 8.50 ರೂಪಾಯಿಯಿಂದ 9 ರೂಪಾಯಿವರೆಗೆ ಮಾರಾಟವಾಗುತ್ತಿದೆ.


​ಮೊಟ್ಟೆ ಬೆಲೆ ಹೀಗೆ ರಾಕೆಟ್ ವೇಗದಲ್ಲಿ ಏರುತ್ತಿರುವುದರಿಂದ ಸಹಜವಾಗಿಯೇ ಮೊಟ್ಟೆ ಪ್ರಿಯರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇದರ ಬೆನ್ನಲ್ಲೇ ಹೋಟೆಲ್ ಹಾಗೂ ಸ್ಟ್ರೀಟ್ ಫುಡ್‌ಗಳಲ್ಲಿ ಕಬಾಬ್, ಆಮ್ಲೆಟ್ ಮತ್ತು ಎಗ್ ರೈಸ್ ಬೆಲೆಗಳೂ ಕೂಡ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ಬೆಂಗಳೂರಿನ ಸ್ಥಳೀಯ ಮಾರುಕಟ್ಟೆಯಲ್ಲಿ ಮೊಟ್ಟೆಯ ತೀವ್ರ ಕೊರತೆ ಎದುರಾಗಿದ್ದು, ಬೆಲೆ ನಿಯಂತ್ರಣ ತಪ್ಪಿ ಇಷ್ಟೊಂದು ದುಬಾರಿಯಾಗಿದೆ.ಈ ಹಿಂದೆ ಕೇವಲ 5 ರೂಪಾಯಿಗೆ ಸಿಗುತ್ತಿದ್ದ ಮೊಟ್ಟೆ, ಈಗ 9 ರೂಪಾಯಿಗೆ ತಲುಪಲು ಪ್ರಮುಖ ಕಾರಣ ನೆರೆರಾಜ್ಯಗಳು. ಬೇರೆ ಬೇರೆ ರಾಜ್ಯಗಳಲ್ಲಿ ಕರ್ನಾಟಕದ ಮೊಟ್ಟೆಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

Share with Friends
author avatar
Digital Desk