LatestTop Storiesವಿಜಯಪುರ-Vijayapura

ವಿಕಲಚೇತನರ ಕಾರಿಗೆ ಟೋಲ್‌ನಲ್ಲಿ ತಡೆ – ಟೋಲ್ ಸಿಬ್ಬಂದಿ ನಡೆಗೆ ಆಕ್ರೋಶ

ವಿಜಯಪುರ: ವಿಜಯಪುರ ಟೋಲ್‌ನಲ್ಲಿ ವಿಕಲಚೇತನ ಕಾರು ಉಚಿತ ಬಿಡದ ಟೋಲ್ ಸಿಬ್ಬಂದಿ ವಿರುದ್ಧ ವಿಕಲಚೇತನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೋಲ್ ಸಿಬ್ಬಂದಿ ನಡೆಗೆ ವಿಕಲಚೇತನ ಆಕ್ರೋಶ ವ್ಯಕ್ತವಾಗಿದ್ದು, ವಿಜಯಪುರದ ಹಿಟ್ನಳ್ಳಿ ಟೋಲ್ ಬಳಿ ಈ ಘಟನೆ ನಡೆದಿದೆ.

ಟೋಲ್‌ನಲ್ಲಿ ವಿಕಲಚೇತನ ಕಾರುಗಳಿಗೆ ಉಚಿತ ಹೊರ-ಒಳ ಪ್ರವೇಶ ಆದೇಶವಿದೆ ಆದರೂ ಸಿಬ್ಬಂದಿ ಬಿಡುತ್ತಿಲ್ಲ ಎಂದು ಆರೋಪಿಸಲಾಗಿದೆ. ವಿಜಯಪುರ ಟೋಲ್ ಮಾತ್ರವಲ್ಲದೆ ಬೇರೆ ಬೇರೆ ಟೋಲ್‌ಗಳಲ್ಲಿ ವಿಕಲಚೇತನರ ಕಾರು ಬಿಡುತ್ತಿಲ್ಲ ಎಂದು ದೂರು ಕೇಳಿಬಂದಿದೆ.

ಘಟನೆಯಲ್ಲಿ ವಿಕಲಚೇತನರ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಕಾರು ಬಿಡದ ಟೋಲ್ ಸಿಬ್ಬಂದಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

2023ರ ಮುಂಚೆ ನೋಂದಣಿಯಾಗುವಂತಹ ಮಾರ್ಪಾಡು ಮಾಡಿದ ವಿಕಲಚೇತನ ವಾಹನಗಳಿಗೆ IN CAR 4 ಅಂತ ನಮೂದಾಗಿದೆ.
2023ರ ನಂತರ ನೋಂದಣಿಯಾಗುವ ವಾಹನಗಳಿಗೆ ಅಡಾಪ್ಟೆಡ್ ವೆಹಿಕಲ್ ಅಂತ ಇದೆ.ನಿಯಮದ ಪ್ರಕಾರ ಅಶಕ್ತ, ವಿಕಲಚೇತನರ ವಾಹನಗಳಿಗೆ ಟೋಲ್‌ನಲ್ಲಿ ಫ್ರೀ ಆದೇಶವಿದೆ.

ಆದರೆ ಮೇಲಾಧಿಕಾರಿಗಳು ಟೋಲ್ ಸಿಬ್ಬಂದಿಗೆ ಸರಿಯಾದ ರೀತಿ ಮಾಹಿತಿ ನೀಡದೆ ಅವಾಂತರ ಸೃಷ್ಟಿಯಾಗಿದೆ. ಇದರಿಂದಾಗಿ ಟೋಲ್‌ಗಳಲ್ಲಿ ಸಿಬ್ಬಂದಿಗೆ ಮಾಹಿತಿ ನೀಡದೆ ತೊಂದರೆ, ಗಂಟೆ ಕಾಲ ಟೋಲ್‌ನಲ್ಲಿ ನಿಂತು ವಾಗ್ವಾದ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Share with Friends
author avatar
Digital Desk