EntertainmentLatestರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ನಟನಿಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ದರ್ಶನ್ ಅಭಿಮಾನಿ…!

ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗಾಗಿ ಇನ್ನೂ ಯಾವೆಲ್ಲ ಕೆಲಸ ಮಾಡುತ್ತಾರೋ. ಇಲ್ಲೋಬ ಚಾಲೇಂಜಿಗ್‌ ಸ್ಟಾರ್‌ ದರ್ಶನ್‌ ಗಾಗಿ (Darshan) ಹೆತ್ತ ಮಗುವನ್ನೇ ಖೈದಿ ಮಾಡಿ ಹುಚ್ಚಾಟ ಮೆರೆದಿದ್ದಾನೆ. ‌

ಹೌದು, ನೆಚ್ಚಿನ ನಟ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ನಟನ ಮೇಲಿನ ಅಂಧಭಿಮಾನಕ್ಕಾಗಿ ಹೆತ್ತ ಮಗುವನ್ನ ಕೈದಿ ಮಾಡಿ ಪೋಟೋ ಶೂಟ್ ಮಾಡಿದ್ದಾನೆ.

ಒಂದು ವರ್ಷದ ಮಗುವಿಗೆ ಖೈದಿ ರೀತಿಯ ಬಟ್ಟೆ ಹಾಕಿ, ಅದಕೆ ಖೈದಿ ನಂಬರ್‌, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಪೋಟೋ ಕ್ಲಿಕ್ಕಿಸಿದ್ದಾನೆ.

ಈ ಹಿಂದೆಲ್ದಲ ಮಕ್ಕಳಿಗೆ ಕೃಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್ ರಂತಹ ಗಣ್ಯ ವ್ಯಕ್ತಿಗಳ ರೀತಿಯ ಪೋಟೋ ಶೂಟ್ ಟ್ರೆಂಡ್ ಆಗಿತ್ತು. ಆದರೆ ಬೆಳೆಯುವ ಮಗುವಿಗೆ ಖೈದಿ ಪೋಟೋ‌ಶೂಟ್ ಮಾಡಿಸೋದೆ ಎಷ್ಟು ಸರಿ ಇದು ಯಾವ ರೀತಿಯ ಟ್ರೆಂಡ್‌ ಎಂದು ಜನರು ಕಿಡಿಕಾರಿದ್ದಾರೆ.

ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಅಭಿಮಾನಿಗಳಿಂದ ನಿತ್ಯ ಒಂದೊಂದು ಹೊಸ ಟ್ರೆಂಡ್ ಮಾಡುತ್ತಿದ್ದಾರೆ. ಮಗುವಿಗೆ ಖೈದಿ ಪೊಟೋ ಶೂಟ್ ಮಾಡಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ದರ್ಶನ ಮೇಲಿನ ಅಭಿಮಾನಕ್ಕೆ ಕಳೆದ ವಾರ ಖೈದಿ ನಂಬರ್‌ನ ಹಾಕಿಸಿಕೊಂಡು ತಮ್ಮ ನೆಚ್ಚಿನ ನಾಯಕನಿಗೆ ಬೆಂಬಲ ನೀಡುತ್ತಿರುವುದಾಗಿ ಟ್ರೆಂಡ್‌ ಸೃಷ್ಟಿ ಮಾಡಿದ್ದಾರೆ.

Share with Friends
author avatar
News Desk