Health | ಆರೋಗ್ಯ

COVID-19 vaccine: ಒಂದಲ್ಲ, ಎರಡಲ್ಲ, 217 ಬಾರಿ ಕೋವಿಡ್-19 ವ್ಯಾಕ್ಸಿನ್‌ ಪಡೆದ ವ್ಯಕ್ತಿ! ಇದನ್ನೂ ಕೇಳಿ ವಿಜ್ಞಾನಿಗಳೇ ಶಾಕ್

ಜರ್ಮನಿ ವ್ಯಕ್ತಿಯೊಬ್ಬ ಕೋವಿಡ್ -19 (Covid 19) ವಿರುದ್ಧ ಹೋರಾಡುವ ವ್ಯಾಕ್ಸಿನ್‌ನ್ನು (Covid-19 vaccine) ಸುಮಾರು 217 ಬಾರಿ ಪಡೆದುಕೊಂಡಿದ್ದಾರೆ. ಇದರಿಂದ ವ್ಯಕ್ತಿಯ ದೇಹದಲ್ಲಿ ರೋಗನಿರೋಧಕ ಶಕ್ತಿ ಮೇಲೆ ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ ಬದಲಾಗಿ 3 ಡೋಸ್ ಪಡೆದವರಿಗಿಂತಲೂ SARS- CoV 2 ವೈರಸ್‌ ವಿರುದ್ಧ ಹೋರಾಡುವ ಪ್ರತಿಕಾಯಗಳನ್ನು ಸೃಷ್ಟಿಸಿದೆ ಎಂದು ತಿಳಿದುಬಂದಿದೆ., ಈ ವ್ಯಕ್ತಿಯ ಮೇಲೆ ಸಂಶೋಧನೆಯ ನಂತರ ದಿ ಲ್ಯಾನ್‌ಸೆಟ್ ಇನ್‌ಫೆಕ್ಟಿಯಸ್ ಡಿಸೀಸ್ ಎಂಬ ಸುದ್ದಿಪತ್ರಿಕೆಯಲ್ಲಿ ಸುದ್ದಿಯಾಗಿದೆ. ವಿಜ್ಞಾನಿಗಳು ಹೇಳುವಂತೆ ಈತನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಜಾಹೀರಾತು

ಅತ್ಯಧಿಕ ಲಸಿಕೆಗಳನ್ನು ಪಡೆದಿರುವ ಜರ್ಮನಿ ವ್ಯಕ್ತಿ, 30 ತಿಂಗಳಲ್ಲಿ ಕೋವಿಡ್ – 19 ವಿರುದ್ಧ ಹೋರಾಡಲು ಸುಮಾರು 217 ಬಾರಿ ಲಸಿಕೆ ಪಡೆದಿದ್ದಾನೆ. ಆತನಿಗೆ ರೋಗ ಲಕ್ಷಣಗಳಾಗಲಿ, ಸೋಂಕಿನಿಂದ ಬಳಲುತ್ತಿರುವ ಲಕ್ಷಣಗಳಾಗಲಿ ಇರಲಿಲ್ಲ ಎಂದು ದಿ ಲ್ಯಾನ್‌ಸೆಟ್ ಇನ್‌ಫೆಕ್ಟಿಯಸ್ ಡಿಸೀಸ್ ಸುದ್ದಿಪತ್ರಿಕೆಯಲ್ಲಿ ತಿಳಿಸಲಾಗಿದೆ.

ಸಂಶೋಧನೆ ಪ್ರಕಾರ, 62 ವರ್ಷದ ವ್ಯಕ್ತಿಯು ನಿರಂತರವಾಗಿ ಲಸಿಕೆಯನ್ನು ಪಡೆದಿದ್ದರೂ ಯಾವುದೇ ಅಡ್ಡಪರಿಣಾಮಗಳು ಬೀರಿಲ್ಲ, ಆತ ತನ್ನ ವೈಯಕ್ತಿಕ ಕಾರಣ ಕೊಟ್ಟಿದ್ದಾನೆ. ಎರ್ಲ್ಯಾಂಜೆನ್‌-ನ್ಯೂರೆಂಬರ್ಗ್ ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ಜರ್ಮನಿ ವ್ಯಕ್ತಿಯನ್ನು ಸಂಪೂರ್ಣವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ಥಳೀಯ ಜರ್ಮನಿ ಸುದ್ದಿ ಪತ್ರಿಕೆಗಳಲ್ಲಿ ನೀಡಿರುವ ಹೇಳಿಕೆಗಳ ಪ್ರಕಾರ ಲಸಿಕೆಗಳನ್ನು ಪಡೆದ ನಂತರ ಆತನ ದೇಹ ಯಾವ ರೀತಿ ಪ್ರತಿಕ್ರಿಯಿಸುತ್ತಿದೆ ಎಂದು ಅಧ್ಯಯನ ಮಾಡಿದ್ದಾರೆ.

ಇದನ್ನೂ ಓದಿ: Eyes Health: ಪ್ರತಿದಿನ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡ್ತೀರಾ? ಆರೋಗ್ಯಕರ ಕಣ್ಣಿಗೆ ಈ 7 ಸಲಹೆ ಪಾಲಿಸಿ

ಅಡ್ಡಪರಿಣಾಮವಾಗಿಲ್ಲ

ಸಂಶೋಧನಾಕಾರುರು ಹೇಳುವ ಪ್ರಕಾರ, ಆ ವ್ಯಕ್ತಿ 134 ಲಸಿಕೆಗಳನ್ನು ಪಡೆದಿರುವುದು ಖಚಿತವಾಗಿದೆ. ಇದರಲ್ಲಿ 8 ವಿವಿಧ ರೀತಿ ಲಸಿಕೆಗಳು ಇವೆ. ಆತನ ರಕ್ತಪರೀಕ್ಷೆಗೆ ಮುಂಚಿತವಾಗಿ ಕೆಲ ಪರೀಕ್ಷೆಗಳನ್ನು ಮಾಡಲಾಗಿದೆ. ವ್ಯಾಕ್ಸಿನ್‌ಗಳು ಪಡೆದಿರುವ ಬಗ್ಗೆ ತಿಳಿದುಕೊಳ್ಳಲಾಗಿದೆ. ಸಂಶೋಧನೆಯಲ್ಲಿ ಗಮನಿಸಿದಂತೆ ಆತ ಅತ್ಯಧಿಕ ಲಸಿಕೆ ಪಡೆದಿದ್ದರೂ ಯಾವುದೇ ಅಡ್ಡಪರಿಣಾಮವಾಗಿಲ್ಲ. ಅದರ ಬದಲು ಆತನಲ್ಲಿ ಒಳ್ಳೆಯ ಸಹಿಷ್ಣುತೆಯನ್ನು ಹೆಚ್ಚಿಸಿದೆ ಎಂದು ಹೇಳಲಾಗಿದೆ.

ಜಾಹೀರಾತು

ಸಂಶೋಧನೆಯಲ್ಲಿ ಕಂಡು ಹಿಡಿದಿದ್ದು ಏನು?

ಸಂಶೋಧನೆ ಪ್ರಕಾರ, ಕೋವಿಡ್ 19 ವಿರುದ್ಧ ಹೋರಾಡುವಂತಹ ಪ್ರತಿರಕ್ಷಣಾ ಜೀವಕೋಶಗಳು ಮತ್ತು ಪ್ರತಿಕಾಯಗಳು ಅತ್ಯಧಿಕವಾಗಿದೆ. ರಕ್ತ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ 3 ವ್ಯಾಕ್ಸಿನ್‌ಗಳನ್ನು ಪಡೆದ ಪ್ರತಿ ವ್ಯಕ್ತಿಯಲ್ಲೂ ಈ ಚೇತರಿಕೆ ಕಂಡಿದೆ. ಒಟ್ಟಾರೆಯಾಗಿ ನಾವು ಯಾವುದೇ ದುರ್ಬಲ ಪ್ರತಿರಕ್ಷಣಾ ಜೀವಕೋಶಗಳನ್ನು ಕಂಡಿಲ್ಲ ಎಂದು ಅಧ್ಯಯನ ಮಾಡಿದ ಕಥಾರಿಯನ್ ಕೋಚರ್‌ ಎಂಬುವವರು ಹೇಳಿದರು.

ಕೋಟಿ ಕೋಟಿ ಸಂಭಾವನೆ ಪಡೆಯುವ ಟಾಪ್ ನಟಿ!


ಕೋಟಿ ಕೋಟಿ ಸಂಭಾವನೆ ಪಡೆಯುವ ಟಾಪ್ ನಟಿ!

ಅತ್ಯಧಿಕವಾಗಿ ಲಸಿಕೆ ಪಡೆಯುವುದರಿಂದ ಏನಾಗುತ್ತದೆ?

ವಿಜ್ಞಾನಿಗಳ ಪ್ರಕಾರ, 2019 ನವೆಂಬರ್‌ನಿಂದ ಅಕ್ಟೋಬರ್ 2023ರವರೆಗೆ ಪರೀಕ್ಷೆಗಳನ್ನು ನಡೆಸಲಾಗಿದೆ. ಅತ್ಯಧಿಕವಾಗಿ ಲಸಿಕೆಗಳು ಪಡೆದಿರುವುದರಿಂದ ಯಾವುದೇ ತೊಂದರೆ, ಅಡ್ಡಪರಿಣಾಮಗಳು ಆಗಿಲ್ಲ. ಸ್ಮರಣಾಶಕ್ತಿಯೂ ಹೆಚ್ಚಾಗಿದೆ. ಒಟ್ಟಾರೆ ಸಂಶೋಧನೆಯಲ್ಲಿ 217 ಬಾರಿ ವ್ಯಾಕ್ಸಿನ್ ಪಡೆದಿರುವ ವ್ಯಕ್ತಿಯ ದೇಹದಲ್ಲಿ ಪ್ರತಿಕಾಯಗಳು ಹೆಚ್ಚಾಗುತ್ತಿದ್ದು, ಕೋವಿಡ್ -19 ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಆಗಿಲ್ಲ ಎಂದು ಸ್ಪಷ್ಟನೆ ದೊರೆತಿದೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Share with Friends
author avatar
News Desk