EntertainmentLatestಬಾಲಿವುಡ್​ - Bollywood

ಮತ್ತೆ ನಟನೆಗೆ ತೆರಳಿದ ಪ್ರೀತಿ ಜಿಂಟಾ

ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ (Preethi Zinta) ಇತ್ತಿಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಮುದುವೆಯಾಗಿ ವಿದೇಶದಲ್ಲಿ (Foreign) ಸೆಟಲ್ ಆಗಿದ್ದಾರೆ. ಐಲಿಎಲ್ ಕಾರಣದಿಂದಾಗಿ ಆಗಾಗ ಅವರು ಭಾರತಕ್ಕೆ ಭೇಟಿ ನೀಡುತ್ತಾರೆ.

ಸುಮಾರು ವರ್ಷಗಳ ನಂತರ ಇದೀಗ ಪ್ರೀತಿ ಜಿಂಟಾ ಅವರು ನಟನೆಗೆ ಕಮ್ ಬ್ಯಾಕ್ (Come Back) ಮಾಡುತ್ತಿದ್ದಾರೆ. ಅವರು ನಟ ಸನ್ನಿ ಡಿಯೋಲ್ ಜೊತೆ ಡ್ಯುಯೆಟ್ ಹಾಡೋಕೆ ನಟಿ ಸಜ್ಜಾಗಿದ್ದು, ಫ್ಯನ್ಸ್ ಖುಷಿಯಾಗಿದ್ದಾರೆ.

ಪ್ರೀತಿ ಜಿಂಟಾ ಅವರು ಲಾಹೋರ್ 1947 ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಜ್‌ಕುಮಾರ್ ಸಂತೋಷಿ ನಿದೇರ್ಶನ ಮಾಡುತ್ತಿದ್ದಾರೆ. ಗದರ್ 2 ಮೂಲಕ ದೊಡ್ಡ ಮಟ್ಟದ ಹಿಟ್ ಕಂಡ ಸನ್ನಿ ಡಿಯೋಲ್ ಅವರು ಈ ಚಿತ್ರದಲ್ಲಿ ಮೂಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಚಿತ್ರದ ಸೆಟ್‌ನ ಫೋಟೋಗಳನ್ನು ಪ್ರೀತಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಅಮಿರ್ ಖಾನ್ ಅವರು ನಿರ್ಮಾಣ ಮಾಡುತ್ತಿದ್ದಾರೆ.

https://youtu.be/sLATI2o90I0?si=sQpWsDdxsGDHQcxC

ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಎರಡ್ಮೂರು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈಗ ಲಾಹೋರ್ 1947 ಚಿತ್ರದ ಮೂಲಕ ಮತ್ತೆ ಈ ಜೋಡಿ ಜೊತೆಯಾಗುತ್ತಿದ್ದಾರೆ.

Share with Friends
author avatar
News Desk