BlogLatestTop Storiesರಾಷ್ಟ್ರೀಯ-National

ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್

ನವದೆಹಲಿ : ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ 40 ನಾಯಕರ ಹೆಸರುಗಳು ಸೇರಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಹೆಸರುಗಳೂ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿವೆ. ಇದಲ್ಲದೆ ಕೆಸಿ ವೇಣುಗೋಪಾಲ್, ಅಜಯ್ ಮಾಕನ್, ಅಂಬಿಕಾ ಸೋನಿ, ಭರತ್ ಸಿಂಗ್ ಸೋಲಂಕಿ, ತಾರಿಕ್ ಹಮೀದ್ ಕರ್ರಾ, ಜೈರಾಮ್ ರಮೇಶ್, ಗುಲಾಮ್ ಅಹಮ್ ಮಿರ್, ಮುಖೇಶ್ ಅಗ್ನಿಹೋತ್ರಿ, ಚರಂಜಿತ್ ಸಿಂಗ್ ಚನ್ನಿ, ಸಲ್ಮಾನ್ ಖುರ್ಷಿದ್, ಸುಖಿಂದರ್ ಸಿಂಗ್ ರಾಂಧವಾ, ಅಮರಿಂದರ್ ಸಿಂಗ್ ರಾಜಾದ್ ವಾಡಿಂಗ್ ನಾಸೀರ್ ಹುಸೇನ್ ವಿಕಾರ್ ರಸೂಲ್ ವಾನಿ ಹೆಸರನ್ನೂ ಘೋಷಿಸಲಾಗಿದೆ.

ರಜನಿ ಪಾಟೀಲ್, ರಾಜೀವ್ ಶುಕ್ಲಾ, ಮನೀಶ್ ತಿವಾರಿ, ಇಮ್ರಾನ್ ಪ್ರತಾಪ್‌ಗರ್ಹಿ, ಕಿಶೋರಿ ಲಾಲ್ ಶರ್ಮಾ, ರಂಜಿತ್ ರಂಜನ್, ರಮಣ್ ಭಲ್ಲಾ, ತಾರಾಚಂದ್, ಚೌಧರಿ ಲಾಲ್ ಸಿಂಗ್, ಪೀರ್ಜಾದಾ ಮೊಹಮ್ಮದ್ ಸಯೀದ್, ಪವನ್ ಮಾಸ್ , ಸುಪ್ರಿಯಾ ಶ್ರೀನೆಟ್, ಕನ್ಹಯ್ಯಾ ಕುಮಾರ್, ಮನೋಜ್ ಯಾದವ್, ಶಾನವಾಜ್ ಚೌಧರಿ, ರಾಜೇಶ್ ಲಿಲೋಥಿಯಾ, ಅಲ್ಕಾ ಲಂಬಾ, ಶ್ರೀನಿವಾಸ್ ಬೀವಿ ಮತ್ತು ನೀರಜ್ ಕುಂದನ್ ಕೂಡ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಮೊದಲ ಹಂತದಲ್ಲಿ ಸೆಪ್ಟೆಂಬರ್ 18 ರಂದು ರಾಜ್ಯದ 24 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಎರಡನೇ ಹಂತದಲ್ಲಿ, ಸೆಪ್ಟೆಂಬರ್ 25 ರಂದು ಜಮ್ಮು ಮತ್ತು ಕಾಶ್ಮೀರದ 26 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಮೂರನೇ ಮತ್ತು ಕೊನೆಯ ಹಂತದಲ್ಲಿ, ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರದ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.ಅಕ್ಟೋಬರ್ 8 ರಂದು ಫ್ರಾಲಿತಾಂಶ ಪ್ರಕಟವಾಗಲಿದೆ.

Share with Friends
author avatar
News Desk