LatestTop Storiesರಾಜಕೀಯ | Politicsರಾಜ್ಯ-Karnataka

ಸಚಿವಕಾಂಕ್ಷಿಗಳು ದೆಹಲಿಯಲ್ಲಿ ಮೊಕ್ಕಾಂ!!

ಬೆಂಗಳೂರು,ಜು.21: ಶತಾಯ ಗತಾಯ ಸಚಿವರ ಸ್ಥಾನ ಪಡೆಯಲೇಬೇಕು ಎಂದು ಕಾಂಗ್ರೆಸ್‌ನ 30ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರು ದೆಹಲಿಗೆ ಬರುವ ಮುನ್ನ ನಿನ್ನೆ ಮತ್ತು ಮೊನ್ನೆ ಸುಮಾರು 30ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಆಗಮಿಸಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವವನ್ನು ಬಳಸಿಕೊಂಡು ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕರು ಹರಸಾಹಸ ನಡೆಸಿದ್ದಾರೆ.
ದೆಹಲಿಯಲ್ಲಿ ಈಗಾಗಲೇ ಶಾಸಕರಾದ ಆರ್.ವಿ. ದೇಶಪಾಂಡೆ, ಆರ್.ಬಿ. ತಿಮ್ಮಾಪುರ, ಬಸವರಾಜ ರಾಯರೆಡ್ಡಿ, ಹರ್ಷದ್ ರಿಜ್ವಾನ್, ಡಾ. ಅಜಯ್‌ಸಿಂಗ್, ಗೋಪಾಲಕೃಷ್ಣ ಬೇಳೂರು, ಅಶೋಕ ಪಟ್ಟಣ, ಆರ್.ಎಸ್. ಪಾಟೀಲ್, ಎನ್.ಎ. ಹ್ಯಾರೀಸ್, ಟಿ.ಬಿ. ಜಯಚಂದ್ರ, ಡಾ.ಹೆಚ್.ಡಿ. ರಂಗನಾಥ್, ಚಲುವರಾಯಸ್ವಾಮಿ, ಶಿವಾನಂದ ಪಾಟೀಲ್, ನರೇಂದ್ರಸ್ವಾಮಿ ಅಬ್ಬಯ್ಯ ಪ್ರಸಾದ್, ಅಲ್ಲಂಪ್ರಭು ಪಾಟೀಲ್, ವಿಜಯಾನಂದ ಕಾಶಪ್ಪನವರ್, ಎಂ.ವೈ. ಪಾಟೀಲ್, ಸೇರಿದಂತೆ ಹಲವು ಶಾಸಕರು ದೆಹಲಿಯಲ್ಲಿ ಇದ್ದು, ಸಚಿವ ಪಟ್ಟಕ್ಕಾಗಿ ಪ್ರಯತ್ನ ನಡೆಸಿದ್ದಾರೆ

Share with Friends
author avatar
Digital Desk