
ಅಪಾಯದ ಅಂಚಿನಲ್ಲಿ ನಿಡಗುಂದಿಯ ಬುದ್ನಿ ಸರ್ಕಾರಿ ಶಾಲೆ..!
ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬುದ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ತೀರ ಶೋಚನೀಯವಾಗಿದ್ದು, ಕಟ್ಟಡವು ಸಂಪೂರ್ಣವಾಗಿ ಅಪಾಯದ ಅಂಚಿನಲ್ಲಿದೆ.
ಸೋರುತ್ತಿರುವ ಮಾಳಿಗೆ: ಮಳೆ ಬಂದರೆ ಸಾಕು ಶಾಲೆಯ ಮೇಲ್ಚಾವಣಿಯಿಂದ ಧಾರೆಧಾರೆಯಾಗಿ ನೀರು ಹರಿಯುತ್ತದೆ.
ಮೂಲಭೂತ ಸೌಕರ್ಯಗಳ ಅಭಾವ: 1968ರಲ್ಲಿ ಪ್ರಾರಂಭವಾದ ಈ ಶಾಲೆಗೆ ಬರೋಬ್ಬರಿ 57 ವರ್ಷಗಳ ಇತಿಹಾಸವಿದ್ದರೂ, ಇಂದಿಗೂ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತವಾಗಿದೆ.

ಕೊಠಡಿಗಳ ಅಭಾವ: ಶಾಲೆಯಲ್ಲಿ 108 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ಕುಳಿತುಕೊಳ್ಳಲು ಸರಿಯಾದ ಕೊಠಡಿಗಳಿಲ್ಲ. ಹೀಗಾಗಿ ಮುಖ್ಯೋಪಾಧ್ಯಾಯರ (HM) ಕೋಣೆಯನ್ನೇ ತರಗತಿಯನ್ನಾಗಿ ಮಾರ್ಪಡಿಸಿಕೊಂಡು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊರ ಅಂಗಳದಲ್ಲಿ ಪಾಠ: ಮಳೆಯಾದಾಗ ಕೊಠಡಿಯೊಳಗೆ ನೀರು ನಿಲ್ಲುವುದರಿಂದ, ಮಕ್ಕಳು ಅನಿವಾರ್ಯವಾಗಿ ಶಾಲೆಯ ಹೊರ ಅಂಗಳದಲ್ಲೇ ಕುಳಿತು ವಿದ್ಯಾಭ್ಯಾಸ ಮಾಡುವಂತಾಗಿದೆ.
ಸಾರ್ವಜನಿಕರ ಹಾಗೂ ಪೋಷಕರ ಆಕ್ರೋಶ: ಹಲವಾರು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಅನುದಾನ ಬಿಡುಗಡೆಯಾಗಿಲ್ಲ. ಶಿಕ್ಷಣ ಸಚಿವರೇ, ಸರ್ಕಾರಿ ಶಾಲೆಗಳ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಒಮ್ಮೆ ಪ್ರತ್ಯಕ್ಷವಾಗಿ ಬಂದು ಗಮನಿಸಿ..!
