10.76 ಲಕ್ಷ ಪ್ರಯಾಣಿಕರಿಗೆ ದಂಡ ಹಾಕಿದ BMRCL – ಬರೋಬ್ಬರಿ 5.38 ಕೋಟಿ ಸಂಗ್ರಹ
ಬೆಂಗಳೂರು: ಒಟ್ಟು 10.76 ಲಕ್ಷ ಮೆಟ್ರೋ (Metro) ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMCRL) ದಂಡ ವಿಧಿಸಿ ಬರೋಬ್ಬರಿ 5.38 ಕೋಟಿ ರೂ. ಹಣವನ್ನು11 ತಿಂಗಳಿನಲ್ಲಿ ವಸೂಲಿ ಮಾಡಿದೆ.
ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್ ಜಾರಿ ಮಾಡಿದೆ. ನಿಯಾಮ ಮಾತ್ರ ಅಲ್ಲ ಜೊತೆಗೆ ದಂಡ ಸಹ ಹಾಕುತ್ತಿದೆ. ಕಳೆದ ಜೂನ್‌ನಿಂದ ಇಲ್ಲಿಯವರೆಗೆ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚು ಸಮಯ ಕಳೆದಿದ್ದ 10.75 ಲಕ್ಷ ಪ್ರಯಾಣಿಕರಿಗೆ ದಂಡ ಹಾಕಲಾಗಿದೆ. ಇದೇ ರೀತಿ ಬರೋಬ್ಬರಿ 5.38 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಸಿಆರ್‌ಎಲ್ ತಿಳಿಸಿದೆ. ಇದನ್ನೂ ಓದಿ: ಪ್ರಜ್ವಲ್‍ಗೆ ಅರ್ಧಿಕ ಸಂಕಷ್ಟ ತಂದೊಡ್ಡಲು SIT ನಿರ್ಧಾರ- 7 ಬ್ಯಾಂಕ್ ಅಕೌಂಟ್‍ಗಳ ಫ್ರೀಝ್ ಗೆ ಸಿದ್ದತೆ
ಕಳೆದ ಜೂನ್ ನಿಂದ ಇಲ್ಲಿಯವರೆಗೆ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚು ಸಮಯ ಕಳೆದಿದ್ದ 10.75 ಲಕ್ಷ ಪ್ರಯಾಣಿಕರಿಗೆ ದಂಡ ಹಾಕಲಾಗಿದೆ. ಒಬ್ಬರಿಗೆ 50 ರೂ. ನಂತೆ 5.38 ಕೋಟಿ ರೂ. ದಂಡ ವಸೂಲಿ ಮಾಡಿದೆ. ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ನಿಯಮದ ಪ್ರಕಾರವೇ ದಂಡ ವಸೂಲಿ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಸಮರ್ಥನೆ ನೀಡಿದೆ. ಇದನ್ನೂ ಓದಿ: ಕಾರವಾರದಲ್ಲಿ ಅಡಿಗೆ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟ
ಕಳೆದ ವಾರ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಯುವಕನಿಗೆ 20 ನಿಮಿಷಗಳ ಕಾಲ ನಿಂತಿದ್ದ ಎಂದು 50 ರೂ. ದಂಡ ಹಾಕಿತ್ತು. ಇದಾದ ಬಳಿಕ ಈಗ ಆಸಕ್ತಿಕರ ವಿಚಾರಗಳು ಬಯಲಿಗೆ ಬರುತ್ತಿದೆ. ಇದನ್ನೂ ಓದಿ: ಬೇಟೆಗೆ ತೆರಳಿದ್ದಾಗ ಮಿಸ್ ಫೈರ್ ಆಗಿ ಯುವಕ ದುರ್ಮರಣ
ಪ್ರಯಾಣಿಕರು ಅವಧಿ ಮೀರಿ ನಿಲ್ದಾಣದಲ್ಲಿ ಇರಬಾರದು ಎಂಬ ನಿಯಮ ಮೊದಲಿನಿಂದಲೂ ಇದೆ. ಪ್ರಯಾಣಿಕರು ಹೆಚ್ಚು ಸಮಯ ನಿಲ್ದಾಣದಲ್ಲಿ ಕಳೆದರೆ ಇತರೆ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಹೀಗಾಗಿ 20 ನಿಮಿಷಕ್ಕೂ ಹೆಚ್ಚಿನ ಸಮಯ ಕಳೆದರೆ ದಂಡ ವಿಧಿಸಲಾಗುತ್ತದೆ. ಬಿಎಂಆರ್‌ಸಿಎಲ್ ದಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ. ಈ ದಂಡ ಪ್ರಯೋಗದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ. ಇದನ್ನೂ ಓದಿ: ತನ್ನ ರ್ಡಾಲಿಂಗ್ ಬಗ್ಗೆ ಸುಳಿವು ಕೊಟ್ಟ ರ್ಡಾಲಿಂಗ್ ಪ್ರಭಾಸ್ – ಕೈ ಹಿಡಿಯುವ ಹುಡುಗಿ ಯಾರು?
