LatestTop Storiesಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಬಿಜೆಪಿಗರಿಗೆ ಮುಸ್ಲಿಂ, ಪಾಕಿಸ್ತಾನ್ ಬಿಟ್ಟರೇ ಬೇರೇನೂ ಗೊತ್ತಿಲ್ಲ

ಬೆಂಗಳೂರು, ಜು.27 : ಬಿಜೆಪಿ ನಾಯಕರಿಗೆ ಮುಸ್ಲಿಂ, ಪಾಕಿಸ್ತಾನ್, ಮಟನ್, ಮಚಲಿ ಎನ್ನೋದನ್ನ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿದ್ದರ ಸಂಬಂಧ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿಗೆ ಪೊಲೀಸರು ನೋಟಿಸ್ ನೀಡಿದ್ದರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನೋಟಿಸ್ ಕೊಡಲು ಬಂದ ಪೊಲೀಸರನ್ನೇ ತಡೆದಿರೋದಕ್ಕೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಪ್ರಕರಣದಡಿ ಇನ್ನೊಂದು ಎಫ್ ಐ ಆರ್ ಹಾಕಬೇಕು, ಒಂದು ವೇಳೆ ಎಫ್ ಐ ಆರ್ ಹಾಕದಿದ್ದರೇ ನಾನು ಪೊಲೀಸರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಬಿಜೆಪಿ ನಾಯಕರು ಸುಳ್ಳಿನ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ. ದೇಶದಲ್ಲಿ ಎರಡೆರಡು ಕಾನೂನು ಇಲ್ಲ,ಉಮರ್ ಖಾಲೀದ್ ಗೂ ಒಂದೇ ಕಾನೂನು ಬಿಜೆಪಿಯವರಿಗೂ ಒಂದೇ ಕಾನೂನು ಎಂದು ಹೇಳಿದರು.
ಇಂದು ನಾನು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ದೆಹಲಿಗೆ ಹೊರಟ್ಟಿದ್ದೇವೆ.ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡುತ್ತೇವೆ.ಹೈಕಮಾಂಡ್ ಕೂಡ ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

Share with Friends
author avatar
Digital Desk