Crime NewsLatestಬೆಂಗಳೂರು-Bengaluruರಾಜ್ಯ-Karnataka

ಮೊದಲ ಬಾರಿಗೆ ಪುತ್ರ ಪ್ರಜ್ವಲ್ ನೋಡಲು ಜೈಲಿಗೆ ಬಂದ ಭವಾನಿ ರೇವಣ್ಣ

ಬೆಂಗಳೂರು: ಜೈಲಿನಲ್ಲಿರುವ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ನೋಡಲು ಭವಾನಿ ರೇವಣ್ಣ (Bhavani Revanna) ಆಗಮಿಸಿದ್ದಾರೆ.

ಸದ್ಯ ಆಶ್ಲೀಲ ವೀಡಿಯೋ ಪ್ರಕರಣದಲ್ಲಿ ಪರಪಪ್ಪನ ಆಗ್ರಹಾರ ಜೈಲು ಸೇರಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನೋಡಲು ತಾಯಿ ಭವಾನಿ ರೇವಣ್ಣ ಅವರು ಇಂದು ಜೈಲಿನತ್ತ ಮುಖ ಮಾಡಿದ್ದಾರೆ. ಪರಪ್ಪನ ಅಗ್ರಹಾರದತ್ತ ಬಂದ ಭವಾನಿ ಅವರು ಕ್ಯಾಮೆರಾ ಕಾಣುತ್ತಿದ್ದಂತೆಯೇ ಕೈಯಿಂದ ಮುಖ ಮುಚ್ಚಿಕೊಂಡಿದ್ದಾರೆ. ಕಾರ್ ಡ್ರೈವರ್ ಮತ್ತು ಪಿಎ ಜೊತೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಭರ್ಜರಿ ವರದಕ್ಷಿಣೆ ಕೊಟ್ಟರೂ ಮಗಳ ಹತ್ಯೆ -ಪೋಷಕರ ಆರೋಪ

ಪೆನ್‍ಡ್ರೈವ್ (Pendrive Case) ವಿಚಾರ ಬಯಲಾಗುತ್ತಿದ್ದಂತೆಯೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಆ ಬಳಿಕ ಎಸ್‍ಐಟಿ ಹಲವು ಬಾರಿ ನೋಟಿಸ್ ಕೊಟ್ಟರೂ ಪ್ರಜ್ವಲ್ ಕ್ಯಾರೇ ಎಂದಿರಲಿಲ್ಲ. ಈ ನಡುವೆ ಅಜ್ಞಾತವಾಸದಂದಲೇ ವಿಡಿಯೋವೊಂದನ್ನು ಮಾಡಿ ಒಂದು ವಾರ ಸಮಯ ಕೋಡಿ ನಾನೇ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ಆ ವೇಳೆಯೂ ಪ್ರಜ್ವಲ್ ಹಾಜರಾಗಿರಲಿಲ್ಲ. ಇದನ್ನೂ ಓದಿ:ವಕೀಲ ದೇವರಾಜೇ ಗೌಡಾಗೆ ಬಿಗ್‌ ರಿಲೀಫ್‌- ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

https://youtu.be/VPXvU7WvTKQ?si=1OXRLo_DxOnfKevb

ಬಳಿಕ ಕೆಲ ದಿನಗಳ ನಂತರ ಪ್ರಜ್ವಲ್ ಹಿಂದಿರುಗಿದ್ದರು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರನ್ನು ಎಸ್‍ಐಟಿಯವರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ತನಿಖೆಯ ಭಾಗವಾಗಿ ಸ್ಥಳಮಹಜರು ನಡೆಸಿ ಕೋರ್ಟ್‍ಗೆ ಹಾಜರು ಪಡಿಸಿದ್ದು, ಇದೀಗ ಪರಪ್ಪನ ಅಗ್ರಹರ ಸೇರಿದ್ದಾರೆ. ಇದನ್ನೂ ಓದಿ:ಪತಿಗಾಗಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಧರಣಿ ಕುಳಿತ ಪತ್ನಿ!

Share with Friends
author avatar
News Desk