Crime NewsLatestಬೆಂಗಳೂರು-Bengaluruರಾಜ್ಯ-Karnataka

ಬಾವಿಯಲ್ಲಿ ಪೊಲೀಸ್ ಕಾನ್ಸ್​ಟೇಬಲ್ ಶವ ಪತ್ತೆ – ಆತ್ಮಹತ್ಯೆ ಶಂಕೆ

ಬೆಂಗಳೂರು: ಪೊಲೀಸ್ ಕಾನ್ಸ್​ಟೇಬಲ್ (police constable)​ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಜ್ಞಾನಭಾರತಿ ವಿಶ್ವವಿದ್ಯಾಲಯದ (Jhanabharati University) ಆವರಣದಲ್ಲಿ ನಡೆದಿದ್ದು, ಕೌಟುಂಬಿಕ ಕಲಹ ಹಿನ್ನಲೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಮಡಿವಾಳ ಠಾಣೆಯ ಕಾನ್ಸ್​ಟೇಬಲ್ ಶಿವರಾಜ್(29) ಮೃತ ವ್ಯಕ್ತಿ. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತ ಕಾನ್ಸ್​ಟೇಬಲ್ ಶಿವರಾಜ್ ಜೂ.26ರಂದು ಮನೆಯಿಂದ ನಾಪತ್ತೆಯಾಗಿದ್ದರು. ಇದನ್ನೂ ಓದಿ: ಮೊದಲ ಬಾರಿಗೆ ಪುತ್ರ ಪ್ರಜ್ವಲ್ ನೋಡಲು ಜೈಲಿಗೆ ಬಂದ ಭವಾನಿ ರೇವಣ್ಣ

https://youtu.be/VPXvU7WvTKQ?si=-ZO1W5LekOOHXT-X

3 ತಿಂಗಳ ಹಿಂದೆ ದಾವಣಗೆರೆ ಮೂಲದ ಯುವತಿಯನ್ನ ಶಿವರಾಜ್ ವಿವಾಹವಾಗಿದ್ದರು. ಮದುವೆ ನಂತರ ಕೌಟುಂಬಿಕ ಕಲಹ ಹಿನ್ನೆಲೆ ದಂಪತಿ ದೂರವಾಗಿದ್ದರು. ಶಿವರಾಜ್ ಮತ್ತು ಕುಟುಂಬದ ವಿರುದ್ಧ ದಾವಣಗೆರೆಯಲ್ಲಿ ವರದಕ್ಷಿಣೆ ಕಿರುಕುಳ ಬಗ್ಗೆ ವಾಣಿ ದೂರು ನೀಡಿದ್ದರು.

https://youtu.be/3ABDTHva30U?si=twGODG3Tqu7B4mkd

ಈ ಕುರಿತಾಗಿ ದಾವಣಗೆರೆ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮೃತದೇವನ್ನ ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. . ಇದನ್ನೂ ಓದಿ: ಭರ್ಜರಿ ವರದಕ್ಷಿಣೆ ಕೊಟ್ಟರೂ ಮಗಳ ಹತ್ಯೆ -ಪೋಷಕರ ಆರೋಪ

Share with Friends
author avatar
News Desk