Crime NewsLatestಬೆಂಗಳೂರು-Bengaluruರಾಜ್ಯ-Karnataka

ವಕೀಲ ದೇವರಾಜೇ ಗೌಡಾಗೆ ಬಿಗ್‌ ರಿಲೀಫ್‌- ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇ ಗೌಡಗೆ (Advocate Devaraje Gowda) ಜಾಮೀನು ಮಂಜೂರು ಆಗಿದೆ.

ಜಾಮೀನು ಕೋರಿ ಹೈಕೋರ್ಟ್‍ಗೆ (Highcourt) ದೇವರಾಜೇ ಗೌಡ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ಜಿ ಉಮಾ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿ ಇಂದು ಆದೇಶ ನೀಡಿದೆ. ಇದನ್ನೂ ಓದಿ:ಪತಿಗಾಗಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಧರಣಿ ಕುಳಿತ ಪತ್ನಿ!

https://youtu.be/VPXvU7WvTKQ?si=DtoP_771eSRAaHVE

ಈ ಹಿಂದೆ ಹಾಸನದ 5ನೇ ಹೆಚ್ಚುವರಿ ಸಿವಿಲ್ ಕೋರ್ಟ್ ದೇವರಾಜೇ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದನ್ನು ಪ್ರಶ್ನಿಸಿ ದೇವರಾಜೇಗೌಡ ಅವರು ಹೈಕೋರ್ಟ್‍ಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ:ಇಂದು ಜೈಲಿಗೆ ದರ್ಶನ್ ಕುಟುಂಬ ಭೇಟಿ- ತಾಯಿ ನೋಡಿ ದರ್ಶನ್‌ ಭಾವುಕ

https://youtu.be/3ABDTHva30U?si=ePjyKT3PdPnemDSi

ಪ್ರಕರಣವೇನು?
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪೆನ್‍ಡ್ರೈವ್ ಬಿಡುಗಡೆ ಮಾಡಿರುವ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಮಹಿಳೆಯೊಬ್ಬರ ಮೇಲೆ ದೇವರಾಜೇ ಗೌಡ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೊಳೆನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ:75ನೇ ವರ್ಷಕ್ಕೆ ಕಾಲಿಟ್ಟಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು- ಶುಭ ಕೋರಿದ ಪ್ರಧಾನಿ ಮೋದಿ

Share with Friends
author avatar
News Desk