
ಜೂ.25ರಂದು ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ
ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಶರ್ಮಿಳಾ ಮಾಂಡ್ರೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮಿಳು ಚಿತ್ರರಂಗದ ನಿರ್ಮಾಪಕ ಸುಧನ್ ಸುಂಧರಮ್ ಅವರೊಂದಿಗೆ ಶರ್ಮಿಳಾ ವಿವಾಹವಾಗಲಿದ್ದು, ಜೂನ್ 25ರಂದು ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.
ಸುಧನ್ ಸುಂಧರಮ್ ಅವರು ತಮಿಳಿನ ಜನಪ್ರಿಯ ಚಿತ್ರಗಳಾದ ಮಹಾರಾಜಾ, ತಾಯ್ ಕಿಳವಿ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ನಿಶ್ಚಿತಾರ್ಥದ ಬಳಿಕ ಇದೇ ವರ್ಷ ಮದುವೆ ನೆರವೇರಿಸಲು ಎರಡೂ ಕುಟುಂಬಗಳು ತೀರ್ಮಾನಿಸಿವೆ.
ಕನ್ನಡದ ಸಜನಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಶರ್ಮಿಳಾ, ಬಳಿಕ ‘ಕೃಷ್ಣ’, ‘ನವಗ್ರಹ’, ‘ಮಾಸ್ ಲೀಡರ್’, ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಡೆವಿಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರಸ್ತುತ ಶರ್ಮಿಳಾ ತಮಿಳಿನ ‘ಅದೃಷ್ಟಶಾಲಿ’ ಹಾಗೂ ಕನ್ನಡದ ‘ದಸರಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದು, ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿಯೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
