BlogTop StoriesVideosಮಂಡ್ಯ-Mandya

ಮಂಡ್ಯ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ಗೋಲ್ಡ್ ಮೆಡಲ್ ಪದವೀಧರೆ

ಮಂಡ್ಯ : ಗೋಲ್ಡ್ ಮೆಡಲ್ ಪದವೀಧರೆ ರೈಲಿನಡಿ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ಮಂಡ್ಯ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದೆ. ಹಂಪಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಗೋಲ್ಡ್‌ ಮೆಡಲ್ ಪದವೀಧರೆ ದೇಹ ಛಿದ್ರ, ಛಿದ್ರವಾಗಿದೆ. ರೈಲಿಗೆ ಸಿಲುಕಿ ಸಾವನ್ನಪ್ಪಿದ ಯುವತಿಯನ್ನು ಸ್ವರ್ಣಸಂದ್ರ ಬಡಾವಣೆಯ 24 ವರ್ಷದ ರಮ್ಯಾ ಅವರಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಎಂಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ರಮ್ಯಾ ಅವರು ಬೆಂಗಳೂರಲ್ಲಿ ಅಕೌಂಟೆಂಟ್ ಟ್ರೈನಿಂಗ್ ಮಾಡುತ್ತಿದ್ದರು. ಪ್ರತಿನಿತ್ಯ ಮಂಡ್ಯದಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದರು. ಇಂದು ರಮ್ಯಾ ಅವರು ಹಳಿ ದಾಟುತ್ತಿದ್ದಾಗ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿದ ಯುವತಿಯ ದೇಹ ಛಿದ್ರಗೊಂಡಿದೆ.

ರಮ್ಯಾ ಹಾಗೂ ಅವರ ತಂದೆ ಪ್ರತಿದಿನ ರೈಲಿನಲ್ಲೇ ಬೆಂಗಳೂರಿಗೆ ಹೋಗುತ್ತಿದ್ದರು. ಎಂದಿನಂತೆ ಇವತ್ತೂ ಕೂಡ ರಮ್ಯಾ ಅವರನ್ನು ಅವರ ತಮ್ಮ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಬಂದಿದ್ದಾನೆ. ಮೃತ ಯುವತಿ ತಮ್ಮ ಮೊದಲು ಅಪ್ಪನನ್ನು ಕರೆದುಕೊಂಡು ಹೋಗಿದ್ದಾರೆ. ಆಮೇಲೆ ರಮ್ಯಾ ಅವರನ್ನು ತಮ್ಮ ಕರೆದುಕೊಂಡು ಬಂದಿದ್ದಾರೆ. ಆಗ ಫ್ಲಾಟ್‌ಫಾರಂ ಹಳಿ ದಾಟುವಾಗ ಹೋಗುವಾಗ ರೈಲು ಡಿಕ್ಕಿಯಾಗಿದೆ.

ರೈಲು ನಿಲ್ದಾಣದ ರೈಲ್ವೆ ಮೇಲ್ಸೇತುವೆ ಬಳಿ ಹಳಿ ದಾಟುವ ವೇಳೆ ಈ ದುರಂತ ಸಂಭವಿಸಿದೆ. ರೈಲ್ವೆ ಹಳಿ ದಾಟುವ ವೇಳೆ ಮೈಸೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ ರೈಲು ಗುದ್ದಿದೆ. Mcom ನಲ್ಲಿ ಚಿನ್ನದ ಪದಕ ಪಡೆದಿದ್ದ ಯುವತಿಯ ದೇಹ ಛಿದ್ರ, ಛಿದ್ರವಾಗಿದೆ. ಮಂಡ್ಯ ರೈಲ್ವೆ ಪೊಲೀಸರು ಮೃತ ಯುವತಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Share with Friends
author avatar
News Desk