Latestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ರಾಹುಲ್, ಖರ್ಗೆ ಭೇಟಿ‌ ಮಾಡಿ ಬೆಂಗಳೂರಿಗೆ ಡಿಕೆಶಿ ವಾಪಸ್

ಬೆಂಗಳೂರು: ರಾಹುಲ್‌ ಗಾಂಧಿ, ಖರ್ಗೆ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ. ಶಿವಕುಮಾರ್‌ (DK̤Shivakumar) ಭೇಟಿ ಮಾಡಿ ರಾಜ್ಯಕ್ಕೆ ವಾಪಸ್‌ ಆಗಿದ್ದಾರೆ.

ಭಾನುವಾರ ಹೈಕಮಾಂಡ್‌ ಗೆ ರಿಪೋರ್ಟ್‌ ಸಲ್ಲಿಸಲು ಡಿಕೆಶಿ ದಹಲಿಗೆ ತೆರಳಿದ್ದವರು ಇದೀಗ ಬೆಂಗಳೂರಿಗೆ ವಾಪಸ್ಸ್‌ ಆಗಿದ್ದಾರೆ. ಭಾನುವಾರ ಸಂಜೆಯವರೆಗೂ ದೆಹಲಿಯಲ್ಲೇ ಇದ್ದು ರಿಪೋರ್ಟ್ ನೀಡಿ ಬಂದಿದ್ದಾರೆ. ಸಿಡ್ಲ್ಯೂಸಿ ಸಭೆ ಬಳಿಕ ಪ್ರತ್ಯೇಕವಾಗಿ ಹೈ ನಾಯಕರನ್ನ ಭೇಟಿ ಮಾಡಿ ರಿಪೋರ್ಟ್‌ ಸಲ್ಲಿಸಿ ಬಂದಿದ್ದಾರೆ. ಇದನ್ನೂ ಓದಿ: ಇಂದು ಮೋದಿ 3.O ಸರ್ಕಾರದ ಮೊದಲ‌ ಕ್ಯಾಬಿನೆಟ್ ಸಭೆ

https://youtu.be/vqst4url-zg?si=Qrwa69O2pr2ikxXr

ಡಿಕೆ ರಿಪೋರ್ಟ್ ನಲ್ಲಿ ಏನಿದೆ..?
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 14 – 16 ಸ್ಥಾನ ಗೆಲ್ಲಬಹುದಾಗಿತ್ತು. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬಂದ ಭಿನ್ನಾಭಿಪ್ರಾಯದಿಂದ “ಕೈ” ಗೆ ಹಿನ್ನಡೆಯಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಅತಿಯಾದ ಆತ್ಮವಿಶ್ವಾಸ ಮತ್ತು ಒಳೇಟಿನಿಂದ ಕಾಂಗ್ರೆಸ್‌ಗೆ ಸೋಲಾಗಿದೆ. ಇನ್ನು ಬೆಳಗಾವಿಯಲ್ಲೂ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ ಎಂದು ರಿಪೋರ್ಟ್‌ನಲ್ಲಿ ಉಲ್ಲೆಖಿಸಲಾಗಿದೆ.

ಬಿಜೆಪಿ-ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿಯಾದ ಕಾರಣ ಮಂಡ್ಯ, ತುಮಕೂರಿನಲ್ಲಿ ವರ್ಕೌಟ್ ಆಗಿದೆ. ವಿಧಾನಸಭೆ ಎಲೆಕ್ಷನ್ ನಂತೆ ಲೋಕ ಎಲೆಕ್ಷನ್ ನಲ್ಲಿ ಗ್ಯಾರಂಟಿ ಕೈ ಹಿಡಿದಿಲ್ಲ. ಆದರೆ ಕಾಂಗ್ರೆಸ್‌ಗೆ ವೋಟ್ ಶೇರಿಂಗ್ 5% ಇಂಪ್ರೂವ್ ಆಗಿದೆ. ಇದನ್ನೂ ಓದಿ: ಇಂದು ಸಿಎಂ, ಡಿಸಿಎಂ ಕಾಂಗ್ರೆಸ್‌ ಶಾಸಕರ ನಿಯೋಗ ಭೇಟಿ

https://youtu.be/N__BjhNj9eo?si=LAEMEJ08JK_b322x

ಪಕ್ಷನಿಷ್ಠರ ವಿರೋಧದ ನಡುವೆಯೂ ಸಚಿವರ ಮಕ್ಕಳಿಗೆಲ್ಲಾ ಟಿಕೆಟ್ ಕೊಟ್ಟಿದ್ದೂ ಸೋಲಿಗೆ ಒಂದು ಕಾರಣವಾದರೆ. ಲಿಂಗಾಯತ, ಒಕ್ಕಲಿಗ ಪ್ರಬಲ ಸಮುದಾಯ ಮತಗಳ ಕ್ರೂಢೀಕರಣದಿಂದ ಕಾಂಗ್ರೆಸ್‌ಗೆ ಹಿನ್ನೆಡೆಯಾಗಿದೆ ಎಂದು ರಿಪೋರ್ಟ್‌ ಮಾಡಲಾಗಿದೆ.

Share with Friends
author avatar
News Desk