ಇಂದು ಮೋದಿ 3.O ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆ
ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾದ (Prime Minster) ನಂತರ ಮೊದಲ ಕ್ಯಾಬಿನೆಟ್ ಸಭೆ (Cabinet Meeting) ಇಂದು ಸಂಜೆ 5 ಗಂಟೆಗೆ ಪ್ರಧಾನಿ ಅಧಿಕೃತ ನಿವಾಸದಲ್ಲಿ ನಡೆಯಲಿದೆ.
ಮೊದಲ ಸಭೆಯಲ್ಲಿ ಮುಂದಿನ 100 ದಿನಗಳ ಕಾರ್ಯಸೂಚಿ ಬಗ್ಗೆ ನರೇಂದ್ರ ಮೋದಿ (Narendra Modi) ತಿಳಿಸಲಿದ್ದಾರೆ. ಜೊತೆಗೆ ಇಂದು ಸಂಜೆಯೊಳಗೆ ಕೇಂದ್ರದ ಕ್ಯಾಬಿನೇಟ್ ಖಾತೆಗಳನ್ನು ಸಹ ಹಂಚಿಕೆ ಮಾಡಲಾಗುತ್ತದೆ. ಇದನ್ನೂ ಓದಿ: ಇಂದು ಪ್ರಜ್ವಲ್ ರೇವಣ್ಣ ಎಸ್ಐಟಿ ಕಸ್ಟಡಿ ಅಂತ್ಯ – ಮತ್ತೊಮ್ಮೆ ಕಸ್ಟಡಿಗೆ ಕೇಳುವ ಸಾಧ್ಯತೆ
ಸದ್ಯ ಪ್ರಮುಖ ಖಾತೆಗಳನ್ನು ಬಿಜೆಪಿ ತಮ್ಮಲ್ಲೆ ಇಟ್ಟುಕೊಳ್ಳಲಿದೆ. ರಕ್ಷಣಾ ಖಾತೆ, ಗೃಹಖಾತೆ, ಹಣಕಾಸು ಖಾತೆ, ವಿದೇಶಾಂಗ, ಹೆದ್ದಾರಿ, ಮೂಲಸೌಕರ್ಯ, ಐಟಿ, ಶಿಕ್ಷಣ ಖಾತೆಗಳು ಬಿಜೆಪಿ ಬಳಿಯೇ ಉಳಿಯಲಿದೆ.
ಬರೋಬ್ಬರಿ 25 ವರ್ಷಗಳ ಬಳಿಕ ಜೆಡಿಎಸ್ಗೆ ಕೇಂದ್ರದಲ್ಲಿ ಸ್ಥಾನ ಸಿಕ್ಕಿದ್ದು, ಕುಮಾರಸ್ವಾಮಿಯವರು ಪ್ರಬಲ ಖಾತೆಯ ನಿರೀಕ್ಷೆಯಲ್ಲಿದ್ದಾರೆ.ಇದನ್ನೂ ಓದಿ: ಸೆಂಟ್ರಲ್ ಜೈಲ್ ನಲ್ಲಿ ಗ್ಯಾಂಗ್ ವಾರ್- ಸಿನಿಮಾ ಶೈಲಿಯಲ್ಲಿ ನಡಿತ್ತು ಗುಂಪುಗಳ ನಡುವೆ ಅಟ್ಯಾಕ್
ಪ್ರಲ್ಹಾದ್ ಜೋಶಿಗೆ & ನಿರ್ಮಾಲ ಸೀತಾರಾಮನ್ ಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಸಿಗಲಿದೆ. ಇನ್ನೂ, ಶೋಭಾ ಮತ್ತು ಸೋಮಣ್ಣಗೆ ರಾಜ್ಯಖಾತೆಯ ಸ್ಥಾನ ಮಾನ ಸಿಗಲಿದೆ.
