Latestಕೋಲಾರ-Kolaraಚುನಾವಣೆ-Electionರಾಜ್ಯ-Karnataka

ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬುಗೆ ಜಯದ ಮಾಲೆ

ಕೋಲಾರ: ಚಿನ್ನದ ನಾಡಲ್ಲಿ ಜೆಡಿಎಸ್‌ (JDS) ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು (Mallesh Babu) ಕೋಲಾರ (Kolar) ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಕಾಂಗ್ರೆಸ್‌ನ (Congress) ಕೆ.ವಿ.ಗೌತಮ್‌ (K.V.Gowtham) ವಿರುದ್ಧ ಬಾಬು ಅವರು 69 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಇದನ್ನೂ ಓದಿ: Election Results: ಮಂಡಿಯಲ್ಲಿ ಕಂಗನಾಗೆ ಭರ್ಜರಿ ಗೆಲುವು

https://youtu.be/D7pe8Pemslc?si=HfubkNclWJsF8PrU

ಗೆಲುವಿನ ಕುರಿತು ಮಾತನಾಡಿದ ಬಾಬು, ಕ್ಷೇತ್ರದ ಜನತೆಗೆ ಚಿರಋಣಿ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳು. ದೇವೇಗೌಡರು ಮತ್ತು ಕುಮಾರಸ್ವಾಮಿ ನಂಬಿಕೆಯಿಟ್ಟು ಟಿಕೆಟ್ ಕೊಟ್ಟಿದ್ದರು. ಅದಕ್ಕೆ ತಕ್ಕ ಉತ್ತರ ಸಿಕ್ಕಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬಹುಮತ ಸಿಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಕ್ಕರೆನಾಡು ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

ಕಾಂಗ್ರೆಸ್ ಗ್ಯಾರೆಂಟಿ ವರ್ಕೌಟ್‌ ಆಗಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾಗಿದೆ. ಅದರ ಲಾಭ ನಮಗೆ ಸಿಕ್ಕಿದೆ. ಒಂದು ವರ್ಷ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡಿದೆ. 6 ಲಕ್ಷ ಮತಗಳನ್ನು ಮತದಾರರು ನೀಡಿದ್ದಾರೆ. ಬಂಗಾರಪೇಟೆಯ ಜನತೆ ನನಗೆ ಬಹುಮತ ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ ಭದ್ರಕೋಟೆ ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಹಿನ್ನೆಡೆ

https://youtu.be/lc15CaHVVn4?si=df57-i0CI3pg2WiH

ನೀರಾವರಿ ಯೋಜನೆ ಮತ್ತು ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುವೆ. ಕುಮಾರಸ್ವಾಮಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗಲಿದ್ದೀಯಾ? ಅದು ಹೈಕಮಾಂಡ್‌ಗೆ ಬಿಟ್ಟ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ

https://youtu.be/bkuh9l3KgRk?si=9iJFZeAGD2r_SH5m
Share with Friends
author avatar
News Desk