Latest

ನಾಸಿಕ್‌ನಲ್ಲಿ ಸುಖೋಯ್ ಯುದ್ಧ ವಿಮಾನ ಪತನ

ಮುಂಬೈ: ಮಹಾರಾಷ್ಟ್ರದ ನಾಸಿಕ್‌ನ (Nashik) ಹೊಲದ ಮೈದಾನವೊಂದರಲ್ಲಿ ಸುಖೋಯ್ ಯುದ್ಧ ವಿಮಾನ (Sukhoi Fighter Jet) ಇಂದು ಪತನಗೊಂಡಿದೆ.

ನಾಸಿಕ್​ನ ಶಿರಸ್ಗಾಂವ್ ಗ್ರಾಮದ ಬಳಿಯ ಹೊಲವೊಂದರಲ್ಲಿ ಯುದ್ಧ ವಿಮಾನ ಪತನಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನವು ಮೈದಾನದಲ್ಲಿ ಪತನಗೊಂಡ ನಂತರ ಹೊಗೆಯೇಳುವ ದೃಶ್ಯಗಳು ಕಂಡುಬಂದವು. ಈ ವಿಮಾನವು ಮಹಾರಾಷ್ಟ್ರದ ನಾಸಿಕ್‌ನ ಓಝಾರ್‌ನಿಂದ ಟೇಕ್ ಆಫ್ ಆಗಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮೂಲಕ ಪರಿಷ್ಕರಿಸಿದ ನಂತರ ಪರೀಕ್ಷಾರ್ಥ ಹಾರಾಟ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಕ್ಕರೆನಾಡು ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

ಪೈಲಟ್ ಮತ್ತು ಸಹ ಪೈಲಟ್ ಸುರಕ್ಷಿತವಾಗಿ ವಿಮಾನದಿಂದ ಹೊರಗೆ ಬಂದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ. ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ತುರ್ತು ಸೇವೆಗಳು ಪೈಲಟ್‌ಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: Election Results: ಮಂಡಿಯಲ್ಲಿ ಕಂಗನಾಗೆ ಭರ್ಜರಿ ಗೆಲುವು

https://youtu.be/kbC5xGOUZd0?si=du5en37soZvgWuZl

ದೇಶದ ಹಲವಾರು ಸ್ಕ್ವಾಡ್ರನ್‌ಗಳಲ್ಲಿ 200ಕ್ಕೂ ಹೆಚ್ಚು ವಿಮಾನಗಳು ಕಾರ್ಯನಿರ್ವಹಿಸುವುದರೊಂದಿಗೆ Su-30 ಭಾರತೀಯ ವಾಯುಪಡೆಯ ಮುಖ್ಯ ಆಧಾರವಾಗಿದೆ. ಸುಖೋಯ್ ಫೈಟರ್ ಜೆಟ್ ಒಂದು ಅವಳಿ-ಎಂಜಿನ್ ಆಗಿದೆ. ಇದು ನಾಲ್ಕನೇ ತಲೆಮಾರಿನ ಯುದ್ಧ ವಿಮಾನವಾಗಿದ್ದು ರಷ್ಯಾ ನಿರ್ಮಿಸಿದೆ. ವಿಮಾನವನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ. ಇದು 20 ವರ್ಷಗಳಿಂದ ಏರ್ ಫೋರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.ಇದನ್ನೂ ಓದಿ: ಸಕ್ಕರೆನಾಡು ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

https://youtu.be/D7pe8Pemslc?si=HfubkNclWJsF8PrU
Share with Friends
author avatar
News Desk