EntertainmentLatest

“ಕಣ್ಣಪ್ಪ” ಚಿತ್ರಕ್ಕೆ ಕಾಜಲ್ ಎಂಟ್ರಿ

ಸಾಕಷ್ಟು ಸದ್ದು ಮಾಡುತ್ತಿರುವ ತೆಲುಗು (Telugu) ಸಿನಿಮಾ ಕಣ್ಣಪ್ಪ (kanappa) ಸಿನಿಮಾಗೆ ಕಾಜಲ್‌ (kajal Agarwal) ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಪಾತ್ರದ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡಿದ್ದು, ಈ ಚಿತ್ರಕ್ಕೆ ತರಾ ಬಳಗ ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಕಾಜಲ್‌ ಅವರು ಸಹ ಸೇರಿಕೊಂಡಿದ್ದಾರೆ.

ಕಾಜಲ್‌ ಮತ್ತು ವಿಷ್ಣು ಮಂಚು ಈ ಹಿಂದೆ ಮೊಸಗಲ್ಲು ಎಂಬ ಚಿತ್ರದಲ್ಲಿ ಸಹೋದರ ಮತ್ತು ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಈ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ವಿಷ್ಣು ಮಂಚು ಅವರ ಬಹುನಿರೀಕ್ಷಿತ ಪ್ರಾಜೆಕ್ಟ್‌ ಕಣ್ಣಪ್ಪ ಚಿತ್ರಕ್ಕೂ ಕಾಜಲ್‌ ಆಗಮಿಸುವ ಮೂಲಕ ಎರಡನೇ ಸಲ ಒಂದಾಗುತ್ತಿದ್ದಾರೆ. ಸದ್ಯ ಈ ಸಿನಿಮಾದಲ್ಲಿ ಕಾಜಲ್‌ ಅವರ ಪಾತ್ರದ ಬಗ್ಗೆ ರಿವೀಲ್‌ ಮಾಡಿಲ್ಲ. ಆದರೆ ವಿಶೇಷವಾದ ಪಾತ್ರವೊಂದರಲ್ಲಿ ಕಾಜಲ್‌ ನಟಿಸಲ್ಲಿದ್ದು, ಕಣ್ಣಪ್ಪ ಸಿನಿಮಾದ ಭಾಗವಾಗಲಿದ್ದಾರೆ. ನೂರಾರು ಕೋಟಿ ಬಜೆಟ್‌ನಲ್ಲಿ ದೊಡ್ಡ ಕ್ಯಾನ್ವಾಸ್‌ನೊಂದಿಗೆ ಮೂಡಿಬರುತ್ತಿರುವ ಈ ಸಿನಿಮಾದ ಶೂಟಿಂಗ್‌ ಸಹ ಅಷ್ಟೇ ಬಿರುಸಾಗಿಯೇ ನಡೆಯುತ್ತಿದೆ. ಇದನ್ನೂ ಓದಿ: ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ-ಮನೆ ಕೆಲಸದಾಕೆಯಿಂದ್ಲೇ ಕೃತ್ಯ

ಮೋಹನ್ ಬಾಬು ನರ‍್ಮಿಸುತ್ತಿರುವ ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ಬಹು ತಾರಾಗಣವೇ ಇದೆ. ಇದನ್ನೂ ಓದಿ: 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಡುಗಾರ ಜಿ.ವಿ ಪ್ರಕಾಶ್

https://youtu.be/OMuk5-xqtY8?si=cGijlJSKuYcMqL4g

ಇತ್ತೀಚೆಗಷ್ಟೇ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಸಹ ಈ ಚಿತ್ರದ ಮೂಲಕ ಸೌತ್‌ ಕಡೆಗೆ ವಾಲಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನೂ ಪರ‍್ಣಗೊಳಿಸಿದ್ದಾರೆ. ಪ್ರಭಾಸ್ ಸಹ ಕೆಲವು ದಿನಗಳ ಹಿಂದೆ ಕಣ್ಣಪ್ಪ ತಂಡವನ್ನು ಸೇರಿಕೊಂಡರು. ಈಗ ಕಾಜಲ್‌ ಅಗರ್‌ವಾಲ್‌ ಸರದಿ ಇದಾಗಿದೆ. ಇದನ್ನೂ ಓದಿ: ತನ್ನ ರ್ಡಾಲಿಂಗ್ ಬಗ್ಗೆ ಸುಳಿವು ಕೊಟ್ಟ ರ್ಡಾಲಿಂಗ್ ಪ್ರಭಾಸ್‌ – ಕೈ ಹಿಡಿಯುವ ಹುಡುಗಿ ಯಾರು?

ಈ ಚಿತ್ರವನ್ನು ಮೋಹನ್ ಬಾಬು ನಿರ್ಮಿಸಿದ್ದು, ಮುಖೇಶ್ ಕುಮಾರ್ ಸಿಂಗ್ ನರ್ದೇಶನ ಮಾಡುತ್ತಿದ್ದಾರೆ. ಭಾರತದ ಹಲವು ಭಾಷೆಗಳಲ್ಲಿ ಈ ಚಿತ್ರ ಡಬ್‌ ಆಗಿ ರಿಲೀಸ್‌ ಆಗಲಿದೆ. ಚಿತ್ರೀಕರಣದ ಮುಕ್ತಾಯದ ಹಂತಕ್ಕೂ ಬಂದು ನಿಂತಿರುವ ಈ ಸಿನಿಮಾ ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕವೂ ಘೋಷಣೆ ಆಗಲಿದೆ.

Share with Friends
author avatar
News Desk