Crime NewsEntertainmentLatestರಾಜ್ಯ-Karnataka

ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ-ಮನೆ ಕೆಲಸದಾಕೆಯಿಂದ್ಲೇ ಕೃತ್ಯ

ಬಹುಭಾಷಾ ನಟಿ, ಹಾಗೂ ಅಮೃತಧಾರೆ (Amruthadare) ಖ್ಯಾತಿಯ ಛಾಯಾ ಸಿಂಗ್ (Chaya Singh) ಅವರ ತಾಯಿ ಮನೆಯಲ್ಲಿ ಮನೆಕೆಲಸದಾಕೆಯೇ ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಕಳ್ಳತನ (Robbery) ಮಾಡಿದ ಮನೆಕೆಲಸದಾಕೆಯ ಬಂಧನವಾಗಿದೆ.

ಛಾಯಾ ಸಿಂಗ್ ಅವರ ಕುಟುಂಬ ಸುಮಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ. ಇದೀಗ ನಟಿ ಛಾಯಾ ಸಿಂಗ್ ತಾಯಿ ಚಮನಲತಾ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆಯಿಂದ ಕೃತ್ಯ ಜರುಗಿದೆ.

ಮನೆಕೆಲಸದಾಕೆ ಕೆಲಸ ಮಾಡುವ ವೇಳೆ ಚಿನ್ನಾಭರನ ದೋಚಿ ಏನೂ ತಿಳಿಯದಂತೆ ವರ್ತಿಸಿದ್ದಾಳೆ. ಬಳಿಕ ಚಿನ್ನಾಬರಣವನ್ನು ಪರಿಶೀಲಿಸಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಡುಗಾರ ಜಿ.ವಿ ಪ್ರಕಾಶ್

https://youtu.be/lwT9p6w4n0U?si=PtxhKFQ5hc0kdM2O

ಘಟನೆಗೆ ಸಂಬಂಧಿಸಿದಂತೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ವೇಳೆ ಕೆಲಸದಾಕೆ ಉಷಾ ಈ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದ್ದು, ಅವರನ್ನು ಬಂಧಿಸಿ ಆಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತಳಿಂದ 66 ಗ್ರಾಂ ಗೋಲ್ಡ್ ಸೇರಿ, 150 ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ.

Share with Friends
author avatar
News Desk