Crime NewsLatestಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಅಶ್ಲೀಲ ವಿಡಿಯೋ ಪ್ರಕರಣ: ಕಾರ್ತಿಕ್ ಬೆಂಗಳೂರಿನಲ್ಲೇ ಇದ್ದಾನೆ, ಡಿಕೆಶಿಯಿಂದಲೇ ರಕ್ಷಣೆ: ಕುಮಾರಸ್ವಾಮಿ

ಬೆಂಗಳೂರು: ಪ್ರಜ್ವಲ್ ಪೆನ್‌ಡ್ರೈವ್ (Prajwal Revanna) ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದಲ್ಲಿ ಪ್ರಮುಖವಾದ ಪ್ರ ಜ್ವಲ್ ಕಾರು ಚಾಲಕ (Car Driver) ಬೆಂಗಳೂರಿನಲ್ಲೇ ಇದ್ದಾನೆ. ಡಿಕೆಶಿ (DK.Shivakumar) ಆತನನ್ನು ರಕ್ಷಣೆ ಮಾಡುತ್ತಿದ್ದಾನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಿಮ್ಮ ತನಿಖೆ ರೇವಣ್ಣ ಹಾಗೂ ಪ್ರಜ್ವಲ್ ಮೇಲೆ ಮಾತ್ರ ಯಾಕೆ ಟಾರ್ಗೆಟ್ ಆಗಿದೆ. ವಿಡಿಯೋ ಬಿಡುಗಡೆ ಮಾಡಿದವರನ್ನ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಗೃಹ ಸಚಿವರಿಗೆ ಪ್ರಶ್ನಿಸಿದ್ದಾರೆ.

https://youtu.be/EPrqVJYszHM?si=J5EEtclsoJcgWIgH

ಇನ್ನು ಎಸ್‌ಐಟಿ ರಚನೆ ಆಗಿದೆ. ಮಹಿಳಾ ಆಯೋಗ ಕೂಡ ಪತ್ರ ಬರೆದಿದೆ. ವಿಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು. ಆದ್ರೆ, ಇದುವರೆಗೂ ಏನು ಮಾಡಿಲ್ಲ. ನವೀನ್, ಕಾರ್ತಿಕ್, ಶ್ರೇಯಸ್ ನೋಟಿಸ್ ಕೊಟ್ಟಿಲ್ಲ, ರೇವಣ್ಣಗೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ. ಬೆಂಗಳೂರಿನ ಗಿರಿನಗರದಲ್ಲೇ ಪ್ರಜ್ವಲ್ ಮಾಜಿ ಡ್ರೈವರ್ ಕಾರ್ತಿಕ್ ಇದ್ದಾನೆ. ನಾನು ಗಲಭೆಗೆ ಪ್ರಚೋದನೆ ಮಾಡೋದಿಲ್ಲ. ಕಾರ್ತಿಕ್‌ನನ್ನು ಖಾಸಗಿ ಚಾನೆಲ್ ಅಲ್ಲಿ ಕುಳಿತು ಟ್ರೈನ್ ಅಪ್ ಮಾಡುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಮಿಸ್ಟರ್ ಪರಮೇಶ್ವರ ಏನ್ ಮಾಡ್ತಾ ಇದ್ದಾರೆ. ನುಗ್ಗಿಸಿ ಹೊಡೆಸೋದಿಲ್ಲ ಎಂದು ಸುಮ್ಮನೆ ಇದ್ದೀನಿ. 14 ವರ್ಷದಿಂದ ಕಾರ್ತಿಕ್? ಕೆಲಸದಲ್ಲಿ ಇದ್ದವನು, ಪ್ರಜ್ವಲ್ ನಡವಳಿಕೆ ಗೊತ್ತಿದ್ರೆ ಕೆಲಸ ಬಿಡಬೇಕಿತ್ತು. ಇದೀಗ ಬಂಡೆ ರಕ್ಷಣೆ ಮಾಡುತ್ತೆ ಎಂದು ಕಾಯ್ತಾ ಇದ್ದಾನೆ ಎಂದಿದ್ದಾರೆ.. ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಸಂತ್ರಸ್ತೆಯರ ಸ್ಪೋಟಕ ಹೇಳಿಕೆ- ಏನು?

ಡಿಕೆ ಸಂಸ್ಕೃತಿ ಎಲ್ಲರಿಗೂ ಗೊತ್ತಾಗಿದೆ. ಡಿಕೆ ದೇವರಾಜೇಗೌಡ ಜೊತೆ ಯಾಕಪ್ಪ ಮಾತಾನಾಡಿದೆ ನೀನು. 5 ಜನ ಇಟ್ಟಕೊಂಡಿದ್ದೀನಿ ಎಂದು ಹೇಳಿದ್ದೀಯ ನೀನು, ನಿನಗೇನಿತ್ತು ಕೆಲಸ ಡಿಕೆ ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾನಮರ್ಯಾದೆ ಇದೆಯಾ, ಎಸ್ಐಟಿ ಅಧಿಕಾರಿಗಳಿಗೆ ಕ್ರೆಡಿಬಲಿಟಿ ಇದ್ಯಾ ಎಂದು ಕಿಡಿಕಾರಿದರು.

ಇನ್ನು ಪ್ರಜ್ವಲ್‌ದು 2900 ಪ್ರಕರಣ ಅಂದಿದ್ದಾರೆ. ಇದೂವರೆಗೂ ಯಾವುದೇ ಕೇಸ್ ಆಗಿಲ್ಲ, ಎಷ್ಟು ಜನ ಬಂದಿದ್ದಾರೆ ಗೊತ್ತಿಲ್ಲ. ಸಂತ್ರಸ್ತೆಯನ್ನು ಇನ್ನೂ ಮಹಜರು ಮಾಡಿದ್ದಾರಾ?, ತೋಟದ ಮನೆಯಲ್ಲಿ ಅಲ್ಲೇ ಹಿಡಿದ್ರಾ, ಸಂತ್ರಸ್ತೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ, ಪವಿತ್ರ ಅವರ ಮನೆಯಿಂದ ಕರೆದುಕೊಂಡು ಬಂದಿದ್ದು, ಅವರನ್ನು ನಿಧಾನವಾಗಿ ಬಿಡ್ತಾರೆ. 12 ಜನರನ್ನು ಕುಮಾರಕೃಪದಲ್ಲಿ ಇಟ್ಟಿದ್ದಾರೆ.. ಇದನ್ನೂ ಓದಿ: ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ – ಕೊಲೆಗಾರನಾದ ಯುವತಿ ತಂದೆ

https://youtu.be/2xXPei1QvXY?si=2-nwNuWzwvLlE7wb

ಇವಾಗ ಸಂತ್ರಸ್ಥೆಯರ ಮೇಲೆ ಯಾಕೆ ಅನುಕಂಪ
ಇನ್ನು ಹುಣಸೂರಿನಲ್ಲಿ ಸಿಡಿ ಬಿಡುವಾಗ ಮುಖ ತೋರಿಸಿದ್ದೀರಿ. ಈಗ ಅನುಕಂಪ ಇವಾಗ ತೋರಿಸ್ತಾ ಇದ್ದೀರಿ, ಈಗ ಯಾಕೆ ಅನುಕಂಪ ನಿಮ್ಮ ಯೋಗ್ಯತೆಗೆ, ನಾನು ರೇವಣ್ಣ ವಿಚಾರದಲ್ಲಿ ಮಾತ್ರ ಹೋರಾಟ ಮಾಡ್ತೀನಿ. ಪ್ರಜ್ವಲ್ ರೇವಣ್ಣ ಬಗ್ಗೆ ಅಲ್ಲ, ಪ್ರಜ್ವಲ್ ರೇವಣ್ಣ ಯಾವಾಗ ಬರ್ತಾರೆ ಅಂತ ಗೊತ್ತಿಲ್ಲ. ನೀವು ತೋರಿಸಿದ್ದಷ್ಟೇ ನಮಗೆ ಗೊತ್ತು. ಅದನ್ನು ಹೊರತು ಪಡಿಸಿ ಬೇರೆ ಏನು ಗೊತ್ತಿಲ್ಲ. 15 ತಾರೀಖು ಬರ್ತಾನೆ ಅಂತ ಹೇಳಿದ್ದಾರೆ ಬರ್ತಾನಾ ನೋಡೋಣ. ನಾಳೆ ಅದರ ಬಗ್ಗೆ ಉತ್ತರ ಕೊಡ್ತೀನಿ. ಇದನ್ನೂ ಓದಿ:ಈಜು ಕಲಿಯಲು ಹೋಗಿ ಬಾಲಕ ಸಾವು

https://youtu.be/IQHIqgFhrRc?si=gbK_N4n8AgMr1lRD
Share with Friends
author avatar
News Desk