ಕುಡಿದ ಅಮಲಿನಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ; ಸ್ನೇಹಿತನನ್ನೆ ಕೊಲೆ ಮಾಡಿದ ರೌಡಿಶೀಟರ್
ಬೆಂಗಳೂರು: ಕುಡಿದ ಅಮಲಿನಲ್ಲಿ ನಡೆದ ಗಲಾಟೆಯಲ್ಲಿ (Fight) ರೌಡಿಶೀಟರ್ ಸ್ನೇಹಿತನನ್ನೆ (Friend) ಕೊಲೆ ಮಾಡಿರುವ ಘಟನೆ ನಾಗಶೆಟ್ಟಿಳ್ಳಿಯಲ್ಲಿ (Nagashettyhalli) ತಡರಾತ್ರಿ ನಡೆದಿದೆ.
ಮೂರ್ತಿ (45) ಕೊಲೆಯಾದ ಆಟೋ ಡ್ರೈವರ್. ಮೂರ್ತಿಗೆ ರೌಡಿಶೀಟರ್ ಶರಣಪ್ಪ ಎಂಬಾತ ಕೆಲ ವರ್ಷಗಳಿಂದ ಪರಿಚಯವಿದ್ದ ಕಾರಣ ನಿನ್ನೆ ಇಬ್ಬರೂ ನಾಗಶೆಟ್ಟಹಳ್ಳಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದನ್ನೂ ಓದಿ: ಕೊನೆಗೂ ‘ಬೆಂದ’ಕಾಳೂರಿಗೆ ತಂಪನ್ನೇರೆದ ವರುಣಾ…! ನಿನ್ನೆ ಸಂಜೆ ಸುಮಾರು 3 ಗಂಟೆಗಳ ಕಾಲ ಮಳೆ
ಜಗಳ ತಾರಕಕ್ಕೇರಿದ್ದು ರೌಡಿಶೀಟರ್ ಶರಣಪ್ಪ ಡ್ರ‍್ಯಾಗರ್ ನಿಂದ ಹಲವುಬಾರಿ ಮೂರ್ತಿಗೆ ಇರಿದಿದ್ದಾನೆ. ತೀವ್ರ ರಕ್ರಸ್ರಾವವಾಗಿ ಮೂರ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು!
ಸದ್ಯ ಆರೋಪಿಯಾದ ರೌಡಿಶೀಟರ್ ಶರಣಪ್ಪನಿಗಾಗಿ ಸಂಜಯ್ ನಗರದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ಅನಾರೋಗ್ಯದಿಂದ ನಿಧಾನ
