Crime NewsLatestರಾಜಕೀಯ | Politicsರಾಜ್ಯ-Karnatakaಶಿವಮೊಗ್ಗ-Shivamogga

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಹೆಚ್‌ಡಿಕೆ

-ಕುಟುಂಬದ ಹೆಸರು ಯಾಕೆ ತರ್ತೀರಾ – ಹೆಚ್‌ಡಿಕೆ ಕಿಡಿ

-ಪಕ್ಷದಿಂದಲೂ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ

ಶಿವಮೊಗ್ಗ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಎಚ್.ಡಿ. ಕುಮಾರಸ್ವಾಮಿ (HD.Kumaraswamy) ಹೇಳಿದ್ದಾರೆ.

ಶಿಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಎಸ್ ಐಟಿ ರಚನೆ ಮಾಡಿದ್ದಾರೆ. ಈ ನೆಲದ ಕಾನೂನಿನಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಇಲ್ಲಿ ವ್ಯಕ್ತಿ ಬಗ್ಗೆ ಚರ್ಚೆ ಮಾಡಿ, ಕುಟುಂಬದ ಹೆಸರು ಏಕೆ ತರುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಛತೀಸ್‌ಗಢದಲ್ಲಿ ಭೀಕರ ಅಪಘಾತ – 23 ಮಂದಿಗೆ ಗಾಯ , 9 ಮಂದಿ ಸಾವು

https://youtu.be/tEV71sOEnV8?si=UYy-eNdnO4Ibkr6h

ಪ್ರಜ್ವಲ್ ಎಲ್ಲಿ ಹೋಗುತ್ತಾರೆ ನಮ್ಮಗೆ ಹೇಗೆ ಗೊತ್ತು. ನಮ್ಮ ಗಮನಕ್ಕೆ ಬಂದಿದ್ದರೆ ಮುಜುಗರ ತಪ್ಪಿಸಬಹುದಿತ್ತು ಎಂದು ಪ್ರಜ್ವಲ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೋದಿಗಾಗಿ ರಕ್ತದಿಂದ ಬಿಡಿಸಿದ ಭಾವಚಿತ್ರ: ಬಾಗಲಕೋಟೆ ಯುವಕನಿಂದ ಉಡುಗರೆ

ಪ್ರಜ್ವಲ್ ವಿರುದ್ಧ ಪಕ್ಷದಿಂದಲೂ ಕ್ರಮ ಕೈಗೊಳುತ್ತೇನೆ. ಉಪ್ಪು ತಿಂದವರು ನೀರು ಕುಡಿಯಬೇಕು. ದೇವೇಗೌಡರು ಹಾಗೂ ನಾನು ಮಹಿಳೆಯರ ಬಗ್ಗೆ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಮಹಿಳೆಯರ ಸುಖ-ಕಷ್ಟ ಕೇಳಿದ್ದೇನೆ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಇದನ್ನೂ ಓದಿ: ಮದುವೆಗೊಪ್ಪದಕ್ಕೆ ಅತ್ಯಾಚಾರವೆಸಗಿ ಕಬ್ಬಿಣದಿಂದ ಮುಖದ ಮೇಲೆ ಹೆಸರು ಬರೆದು ಕೃತ್ಯ ಎಸಗಿದ ಪಾಗಲ್ ಪ್ರೇಮಿ

https://youtu.be/hUI_GuBNXgY?si=VEFvHBGzf-9DXvph
Share with Friends
author avatar
News Desk