Crime NewsEntertainmentLatestಧಾರವಾಡ-Dharwadರಾಜ್ಯ-Karnatakaಸ್ಯಾಂಡಲ್​ವುಡ್-Sandalwood

ನೇಹಾ ಕೊಲೆಗೆ ಡಿಂಪಲ್ ಕ್ವೀನ್ ಗರಂ: ಕೊಲೆಗಾರನನ್ನ ಜನಸಾಮಾನ್ಯರಿಗೆ ಒಪ್ಪಿಸಿ ಎಂದ ರಚಿತಾ

ಹುಬ್ಬಳ್ಳಿಯಲ್ಲಿ ನಡೆದ ನೇಹಾ (Neha) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ನಟ-ನಟಿಯರು ಪ್ರತಿಕ್ರಿಯಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮುಲಕ ನ್ಯಾಯಕ್ಕಾಗಿ ಕುಗೆತ್ತಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರು ಪ್ರತಿಕ್ರಿಯಿಸಿ, ಬದುಕಿ ಬಾಳಬೇಕಾಗಿದ್ದ 23 ವರ್ಷದ ನೇಹಾ ಸ್ನೇಹಿತ ಫಯಾಜ್ ಕೈಯಾರೆ ಸಾವನ್ನಪ್ಪಿದ್ದಾಳೆ. ಕಾಲೇಜು ಆವರಣದಲ್ಲೇ ಉಸಿರುಚೆಲ್ಲಿದ್ದಾಳೆ. ಈಕೆ ಸಾವಿಗೆ ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಸ್ಯಾಂಡಲ್‌ವುಡ್ ತಾರೆಯರೂ ಸಹ ಈ ಘಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

https://youtu.be/Dm7ueJm9lRw?si=oMHTDxoSwHuVbW7o

ಜಾತಿ, ಧರ್ಮ ಯಾವುದೇ ಆಗಿರಲಿ ಮೊದಲು ನಾವು ಮಾನವರು. ನಾನು ಈ ಪೋಸ್ಟ್ ಹಾಕಲು ಕಾರಣ ಆಕೆಗೆ ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ. ಸರ್ಕಾರಕ್ಕೆ ನನ್ನ ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದಿದದ್ದಾರೆ.

Share with Friends
author avatar
News Desk