
ಸಾವಿನಲ್ಲಿ ಒಂದಾದ ಸಹೋದರರು..!
ಕೊಪ್ಪಳ.ಸೆ.22-ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಪಟ್ಟಣದಲ್ಲಿ ಅಣ್ಣ-ತಮ್ಮ ಇಬ್ಬರು 24 ಗಂಟೆಯೊಳಗೆ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ.
ಹನುಮಸಾಗರದ ಡಾಲಾಯತ್ ಕುಟುಂಬದಲ್ಲಿ ಈ ಘಟನೆ ಸಂಭವಿಸಿದೆ.ಸೋಮವಾರ ಸಂಜೆ ಖಾಜೇಸಾಬ ಡಾಲಾಯತ್ (65) ಹೃದಯಾಘಾತದಿಂದ ಮೃತಪಟ್ಟಿದ್ದರು. ತಮ್ಮನ ಅಂತ್ಯಕ್ರಿಯೆ ನಡೆಯುವ ಮುನ್ನವೇ ಇಂದು ಬೆಳಗ್ಗೆ ಅಣ್ಣ ಪೀರಸಾಬ ಡಾಲಾಯತ್ (89) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಹೀಗಾಗಿ ಕೇವಲ 24 ಗಂಟೆಯೊಳಗೆ ಅಣ್ಣ-ತಮ್ಮ ಇಬ್ಬರೂ ಸಾವನ್ನಪ್ಪಿದ್ದು, ಕುಟುಂಬಸ್ಥರು ಹಾಗೂ ಬಂಧುಗಳಲ್ಲಿ ದುಃಖ ಮಡುಗಟ್ಟಿದೆ.ಇಬ್ಬರ ಅಂತ್ಯಕ್ರಿಯೆಯನ್ನು ಏಕಕಾಲದಲ್ಲಿ ನೆರವೇರಿಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ.
