
ಶಾರ್ಟ್ ಸರ್ಕ್ಯೂಟ್ನಿಂದ ನಾಲ್ವರ ಸಾವು ಪ್ರಕರಣ – ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ
ಬೆಳಗಾವಿ,ಸೆ15 :ಬೆಳಗಾವಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಪರಿಹಾರದ ಕುರಿತು ಡಿಸಿ ಕಚೇರಿಗೆ ಹೋಗಿ ಚರ್ಚೆ ಮಾಡ್ತೇವಿ ಎಂದು ಸಚಿವರು ತಿಳಿಸಿದ್ದಾರೆ.ಅಗ್ನಿ ಅವಘಡವಾಗಿ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಇದಾರೆ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಶೆಡ್ಗಳಲ್ಲಿ ವಾಸ ವಿಚಾರ, ಈ ರೀತಿ ಎಲ್ಲಾ ಕಡೆ ಸಮಸ್ಯೆ ಇದೆ ಎಂದು ಹೇಳಿದ ಸಚಿವರು, ಸರ್ಕಾರದಿಂದ ಐವತ್ತು ಸಾವಿರ ಸೈಟ್ ಹಂಚಿಕೆ ಮಾಡ್ತೇವಿ. ಆ ಸ್ಕೀಮ್ ನಲ್ಲಿ ಶೆಡ್ ನಲ್ಲಿರುವವರಿಗೆ ಅನುಕೂಲ ಮಾಡ್ತೇವಿ ಎಂದು ಭರವಸೆ ನೀಡಿದರು.
ಮೃತರ ಕುಟುಂಬಕ್ಕೆ ಪರಿಹಾರದ ಕುರಿತು ಸರ್ಕಾರದ ಜೊತೆಗೆ ಚರ್ಚೆ ಮಾಡ್ತೇನಿ. ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ಸಭೆ ಮಾಡ್ತೇವಿ. ಗಾಯಾಳುಗಳ ಚಿಕಿತ್ಸೆ ವೆಚ್ಚ ಕೂಡ ಭರಿಸುತ್ತೇವೆ ಎಂದ ಸಚಿವ ಸತೀಶ್ ಜಾರಕಿಹೊಳಿ.
