LatestTop Storiesಜಿಲ್ಲಾ ಸುದ್ದಿಗಳು | District Newsತುಮಕೂರು-Tumakuru

ತುಮಕೂರು ಹಿಂದೂ ಮಹಾ ಗಣಪತಿ ಪುರ ಪ್ರವೇಶ

ತುಮಕೂರಿನಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಮಹಾ ಗಣಪತಿ ಪುರ ಪ್ರವೇಶ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.9ನೇ ವರ್ಷದ ಹಿಂದೂ ಮಹಾ ಗಣಪತಿ ಮಹೋತ್ಸವದ ಅಂಗವಾಗಿ ಗಣಪತಿ ಮೂರ್ತಿಯ ಪುರ ಪ್ರವೇಶ ಅತ್ಯಂತ ಅದ್ದೂರಿಯಾಗಿ ನೆರವೇರಿದೆ

ಪುರ ಪ್ರವೇಶದ ಅಂಗವಾಗಿ ಕ್ಯಾತ್ಸಂದ್ರದ ಜಾಸ್ ಟೋಲ್ ನಿಂದ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಿಂದೂ ಕಾರ್ಯಕರ್ತರು ಮತ್ತು ಭಕ್ತಾದಿಗಳು.

ಜೈಕಾರ ಕೂಗುತ್ತಾ ಸಾಂಪ್ರದಾಯಿಕ ಕಲಾತಂಡಗಳು ಹಾಗೂ ಮದ್ದಲೆಯ ಸದ್ದಿನೊಂದಿಗೆ ಗಣೇಶ ಮೂರ್ತಿಯನ್ನು ಭಕ್ತಿ ಭಾವದಿಂದ ನಗರಕ್ಕೆ ಬರ ಮಾಡಿಕೊಂಡಿದ್ದಾರೆ.

ಭದ್ರಮ್ಮ ಸರ್ಕಲ್ ಹತ್ತಿರದ ಬಿಹೆಚ್ ರಸ್ತೆಯ, ಸೋಮೆ ಕಟ್ಟೆ ಮಠದ ಆವರಣದಲ್ಲಿಇಂದು ಮಹಾಗಣಪತಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಈ ಉತ್ಸವಕ್ಕೆ ಮುನ್ನವೇ ವಿವಿಧ ಮಠಾಧೀಶರ ನೇತೃತ್ವದಲ್ಲಿ ಬಹು ಪೂಜೆ ಹಾಗೂ ದ್ವಜ ಪೂಜೆ ವಿದ್ಯುಕ್ತ ಚಾಲನೆ ನೀಡಲಾಗಿತ್ತು.ಪುರ ಪ್ರವೇಶದ ನಂತರದ 13 ದಿನಗಳ ಕಾಲ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ನಗರದ ವಿವಿಧ ಸಂಘ-ಸಂಸ್ಥೆಗಳು ಪ್ರತಿಷ್ಠಾಪಿಸುವ ಸುಮಾರು 25 ರಿಂದ 30 ಗಣಪತಿ ಮೂರ್ತಿಗಳನ್ನು ಒಟ್ಟುಗೂಡಿಸಿ ಬೃಹತ್ ಸಾಮೂಹಿಕ ವಿಸರ್ಜನಾ ಶೋಭ ಯಾತ್ರೆಯನ್ನು ಆಯೋಜಿಸಲಾಗಿದೆ.

Share with Friends
author avatar
Digital Desk