LatestTop Storiesಜಿಲ್ಲಾ ಸುದ್ದಿಗಳು | District News

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಭಾರಿ ಪಂಗನಾಮ..!

ಹುಬ್ಬಳ್ಳಿ : ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇರುತ್ತಾರೆ.

ಮೇಲಿನ ಮಾತಿಗೆ ಸಂಬಂಧಿಸಿದಂತೆ ಮತ್ತೊಂದು ಮೋಸದ ಬೃಹತ್ ಜಾಲ ಸಾವಿರಾರು ಮುಗ್ಧ ಜನರ ಹಣವನ್ನು ದೋಚಿಕೊಂಡು ಹೋಗಿದೆ. ಹೆಚ್ಚಿನ ಹಣದ ಆಸೆ ತೋರಿಸಿ ಸಾವಿರಾರು ಹಳ್ಳಿಯ ಜನರಿಂದ ಕೋಟ್ಯಂತರ ರೂಪಾಯಿಯನ್ನು ವಂಚಿಸಲಾಗಿದೆ.

ಹೌದು, ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ನೂರಾರು ಹಳ್ಳಿಯ ಜನರನ್ನೇ ಟಾರ್ಗೆಟ್ ಮಾಡಿದ್ದ ಈ ಮೋಸದ ಜಾಲ ಯಾವುದೇ ಶ್ರಮ ವಹಿಸದೇ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬ ಆಸೆ ತೋರಿಸಿ ಪಂಗನಾಮ ಹಾಕಿದ್ದಾರೆ.

ಅದು ಕೂಡಾ ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರ ಎಂಎಲ್ಎ ಕ್ಷೇತ್ರವಾದ ಕಲಘಟಗಿ ಕ್ಷೇತ್ರದ ಜನರಿಗೆ ಪಂಗನಾಮ ಹಾಕಿದ್ದಾರೆ.ಹೆಚ್ಚಿನ ಹಣದ ಆಸೆ ನಂಬಿ ಹಣವನ್ನು ಹೂಡಿಕೆ ಮಾಡಿರುವ ಮುಗ್ಧ ಜನರು ಗೋಳಾಡುತ್ತಿದ್ದಾರೆ.

FBT (File Based Token) ಹೆಸರಿನಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದ ಆನ್‌ಲೈನ್ ವಂಚನೆ ಜನರಿಗೆ ಹಣವನ್ನು ದ್ವಿಗುಣಗೊಳಿಸುವ ಅಥವಾ ಹೆಚ್ಚಿನ ಲಾಭಾಂಶ ನೀಡುವ ಆಮಿಷ ತೋರಿಸಿ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ.ಆರಂಭದಲ್ಲಿ ಕಡಿಮೆ ಹಣ ಹೂಡಿಕೆ ಮಾಡಲು ಹೇಳಿ, ಪ್ರತಿದಿನ ಉತ್ತಮ ಕಮಿಷನ್ ಅಥವಾ ರಿಟರ್ನ್ಸ್ ತೋರಿಸಿ ನಂಬಿಕೆ ಹುಟ್ಟಿಸುತ್ತಾರೆ.

ಟಾಸ್ಕ್ / ಟೋಕನ್ ಖರೀದಿ: FBT ಹೆಸರಿನಲ್ಲಿ ಡಿಜಿಟಲ್ ಟೋಕನ್‌ಗಳನ್ನು ಖರೀದಿಸಲು ಅಥವಾ ಕೆಲವು ಆನ್‌ಲೈನ್ ಟಾಸ್ಕ್‌ಗಳನ್ನು ಪೂರ್ಣಗೊಳಿಸಲು ಹಣ ಹೂಡಿಕೆ ಮಾಡಿಸಿಕೊಳ್ಳಲಾಗುತ್ತದೆ.

ಹಣ ಡ್ರಾ ಮಾಡಲು ನಿರ್ಬಂಧ: ನಿಮ್ಮ ಖಾತೆಯಲ್ಲಿ ಹಣ ಹೆಚ್ಚಾದಂತೆ ಕಾಣಿಸಿದರೂ, ಅದನ್ನು ವಿತ್‌ಡ್ರಾ (Withdraw) ಮಾಡಲು ಹೋದಾಗ ಟ್ಯಾಕ್ಸ್, ಪ್ರೊಸೆಸಿಂಗ್ ಫೀಸ್ ಹೆಸರಿನಲ್ಲಿ ಮತ್ತಷ್ಟು ಹಣ ಕೇಳುತ್ತಾರೆ. ಕೊನೆಗೆ ಆಪ್ ಅಥವಾ ವೆಬ್‌ಸೈಟ್ ಕ್ಲೋಸ್ ಮಾಡಿ ಕೈಕೊಡುತ್ತಾರೆ.

Share with Friends
author avatar
Digital Desk