
ಅಕ್ರಮ POP ಗಣೇಶ ಶೆಡ್ ಮೇಲೆ ನ್ಯೂಸ್ ದಾಳಿ – 20-30 ಬೃಹತ್ ಮೂರ್ತಿಗಳು ಪತ್ತೆ
ಕೋಲಾರ: ಅಕ್ರಮ POP ಗಣೇಶ ಶೆಡ್ ಮೇಲೆ ಸಂಪೂರ್ಣ ನ್ಯೂಸ್ ದಾಳಿ ನಡೆಸಲಾಗಿದೆ.ಕೋಲಾರ ತಾಲೂಕು ವೇಮಗಲ್ ಸಮೀಪ ಅಕ್ರಮ POP ಗಣೇಶ ತಯಾರಿಕೆ ಬಯಲು – ನ್ಯೂಸ್ ತಂಡದ ಕಾರ್ಯಾಚರಣೆ ಯಶಸ್ವಿಯಾಗಿದೆ.
ನಂದಿಕಾಮನಹಳ್ಳಿ ಗ್ರಾಮದ ಸರ್ವೆ ನಂ.10 ರ 4.25 ಎಕರೆ ಜಮೀನಿನಲ್ಲಿ ಯಾವುದೇ ಪರ್ಮಿಷನ್ ಇಲ್ಲದೆ ಶೆಡ್* ನಿರ್ಮಿಸಿ ಅಕ್ರಮವಾಗಿ ಗಣೇಶ ಮೂರ್ತಿಗಳ ತಯಾರಿಕೆ ನಡೆಯುತ್ತಿತ್ತು.
ಸರ್ಕಾರ POP ನಿಷೇಧಿಸಿ ಆದೇಶ ಹೊರಡಿಸಿದ್ದರೂ 20 ರಿಂದ 30 ಬೃಹತ್ POP ಗಣೇಶ ಮೂರ್ತಿಗಳ ತಯಾರಿಕೆ ನಡೆಯುತ್ತಿರುವುದು ಪತ್ತೆಯಾಗಿದೆ.
ಸ್ಥಳದಲ್ಲಿ POP ಜೊತೆಗೆ ಕಬ್ಬಿಣದ ಚೂರುಗಳು, ಅಪಾಯಕಾರಿ ಕೆಮಿಕಲ್ ಮಿಶ್ರಣ ಪತ್ತೆ ಆಗಿದೆ.ಮೇಲ್ನೋಟಕ್ಕೆ ಬೆಂಗಳೂರು ಕಾಡಗೋಡಿ ಮೂಲದ ವ್ಯಕ್ತಿಗಳಿಂದ ಈ ಅಕ್ರಮ ದಂಧೆ ಎಂಬ ಶಂಕೆ ವ್ಯಕ್ತವಾಗಿದೆ.
ಮಾಹಿತಿ ಬೆನ್ನಲ್ಲೇ ಸ್ಥಳಕ್ಕೆ ವೇಮಗಲ್ ಪೊಲೀಸ್ ಅಧಿಕಾರಿಗಳು ದೌಡು – ಪರಿಶೀಲನೆ ನಡೆಸುತ್ತಿದ್ದಾರೆ.ಯಾವ ಆಧಾರದ ಮೇಲೆ ಜಮೀನು ಮಾಲೀಕರು ಭೂಮಿ ಕೊಟ್ಟರು? – ಪೊಲೀಸರ ತೀವ್ರ ವಿಚಾರಣೆ ನಡೆಯುತ್ತಿದೆ.
ಪರಿಸರಕ್ಕೆ ಮಾರಕ POP ಗಣೇಶ – ಕೆರೆ, ಕುಂಟೆ, ಜಲಮೂಲಗಳಿಗೆ ಗಂಭೀರ ಅಪಾ ಇದೆ. POP ಕರಗದೆ ನೀರು ಕಲುಷಿತಗೊಳಿಸುತ್ತದೆ.
ಅಕ್ರಮ ಶೆಡ್ ವಿರುದ್ಧ ಪರಿಸರ ಇಲಾಖೆ ಮತ್ತು ಕಂದಾಯ ಇಲಾಖೆ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
POP ಗಣೇಶಗಳನ್ನ ವಶಕ್ಕೆ ಪಡೆದು, ಶೆಡ್ ಸೀಜ್ ಮಾಡುವಂತೆ ಸಾರ್ವಜನಿಕರ ಒತ್ತಾಯ ಹೆಚ್ಚಾಗಿದೆ.ಕಂದಾಯ ಅಧಿಕಾರಿಗಳು ಭೇಟಿ ಪರಿಶೀಲನೆ* ನಡೆಸಿದ್ದಾರೆ. ಪರಿಸರ ಮಾಲಿನ್ಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
