LatestTop Storiesಜಿಲ್ಲಾ ಸುದ್ದಿಗಳು | District News

ಶ್ರಾವಣದ ಕೊನೆಯ ಮಂಗಳವಾರ – ಹೊದಿಗೆರೆಯಲ್ಲಿ ಕೆರೆಕೋಡಿ ಕೆಂಚಮ್ಮ ದೇವಿಗೆ ವಿಶೇಷ ಪೂಜೆ

ಚನ್ನಗಿರಿ: ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಶ್ರಾವಣದ ಕೊನೆಯ ಮಂಗಳವಾರದ ಅಂಗವಾಗಿ ಇತಿಹಾಸ ಪ್ರಸಿದ್ಧ ಶ್ರೀ ಕೆರೆಕೋಡಿ ಕೆಂಚಮ್ಮ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು.

ಹೂವು, ಹಣ್ಣು ಹಾಗೂ ಪುಷ್ಪಾಲಂಕಾರದಿಂದ ಸಿಂಗರಿಸಲಾದ ತಾಯಿಯ ದಿವ್ಯ ರೂಪ ಭಕ್ತರ ಗಮನ ಸೆಳೆಯಿತು. ದೇವಿಯ ಅಲಂಕಾರ ನೋಡಲು ಎರಡು ಕಣ್ಣು ಸಾಲದು ಎನ್ನುವಂತಿತ್ತು.

ಹೊದಿಗೆರೆ ಚತುರ್ಬಾಹು ಕನ್ನಡಿಗ ಯುವ ಸಂಘಟನೆ ಹಾಗೂ ಗೆಳೆಯರ ಬಳಗದ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವಕರೇ ಮುಂದೆ ನಿಂತು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಶ್ರಾವಣದ ಕೊನೆಯ ಮಂಗಳವಾರ ಹೊದಿಗೆರೆಯಲ್ಲಿ ಕೆರೆಕೋಡಿ ಕೆಂಚಮ್ಮ ದೇವಿಗೆ ವಿಶೇಷ ಪೂಜೆ

ಗ್ರಾಮದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಭಕ್ತರ ದಂಡು ಹರಿದುಬಂದಿತ್ತು.ಭಕ್ತರಿಗಾಗಿ ಅನ್ನದಾಸೋಹ ಮತ್ತು ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಆಗಮಿಸಿದ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ದೇವಸ್ಥಾನ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಭಕ್ತರ ಅನುಕೂಲಕ್ಕಾಗಿ ಸ್ವಚ್ಛತೆ, ದರ್ಶನ ಮತ್ತು ಪೂಜಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಶ್ರಾವಣದ ಕೊನೆಯ ಮಂಗಳವಾರದ ಧಾರ್ಮಿಕ ಕಾರ್ಯಕ್ರಮವು ಭಕ್ತಿ ಮತ್ತು ಸಂಭ್ರಮದಿಂದ ವಿಜೃಂಭಣೆಯಿಂದ ನಡೆಯಿತು.

Share with Friends
author avatar
Digital Desk