LatestTop Storiesತುಮಕೂರು-Tumakuruರಾಯಚೂರು

ಟವರ್ ಕಂಬದ ತುತ್ತ ತುದಿಗೆ ಏರಿ ಯುವಕ‌ ಹುಚ್ಚಾಟ..

ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದ ಗರ್ಲ್ಸ್ ಹೈಸ್ಕೂಲ್ ಹಿಂಭಾಗದ ಟವರ್ ಕಂಬದ ತುತ್ತ ತುದಿಗೆ ಏರಿ ಯುವಕ ಹುಚ್ಚಾಟ ಮೆರೆದಿದ್ದಾನೆ.

ಕಳೆದ ಒಂದು ಗಂಟೆಯಿಂದ ಟವರ್ ನ‌ ಮೇಲೆಯೇ ಕುಳಿತಿರುವ ವ್ಯಕ್ತಿ,ಒಮ್ಮೊಮ್ಮೆ ಟವರ್ ನಿಂದ ಕೆಳಗೆ ಬೀಳುವಂತಿರುವ ವ್ಯಕ್ತಿಯ ವರ್ತನೆ ಸ್ಥಳೀಯರಳ್ಳಿ ಆತಂಕ ಉಂಟು ಮಾಡಿದೆ.

ಆದ್ರೆ ಯುವಕ ಟವರ್ ಮೆಲೇ ಹತ್ತಿರುವುದರಿಂದ ಯುವಕನ ಮನವೊಲಿಕೆ ಮಾಡಲಾಗಿದೆ.ಕಳೆದ ಒಂದು ಗಂಟೆಯಿಂದ ಟವರ್ ನ‌ ಮೇಲೆಯೇ ಕುಳಿತಿರುವ ವ್ಯಕ್ತಿ,ಟವರ್ ಏಕೆ ಏರಿದ್ದಾನೆ ಎಂಬುದು ತಿಳಿದು ಬಂದಿಲ್ಲ.

ಸ್ಥಳದಲ್ಲಿ ಕಿಕ್ಕಿರಿದು ಜಮಾವಣೆಯಾದ ನೂರಾರು ಜನ,ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಕ್ಕೆ ಸಿದ್ಧತೆ ಮಾಡಲಾಗಿದೆ.ಈ ಘಟನಾ ಸ್ಥಳಕ್ಕೆ ಆಗನಿಸಿದ ಪೊಲೀಸರು ವ್ಯಕ್ತಿಯ ಮನವೊಲಿಸುವ ಕಾರ್ಯ ನಡೆಸಿದ್ದಾರೆ.

ಯುವಕನನ್ನು ಕೆಳಗಿಳಿಸಲು ಪೊಲೀಸರ ಹರಸಾಹಸ ಮಾಡಿದ್ದಾರೆ.ಈವರೆಗೂ ವ್ಯಕ್ತಿ ಯಾರು, ಯಾವ ಊರು ಎಂಬುದರ ಮಾಹಿತಿ ತಿಳಿದು ಬಂದಿಲ್ಲ.ಟವರ್ ಏಕೆ ಏರಿದ್ದಾನೆ ಎಂಬುದು ಕೂಡ ತಿಳಿಯದೆ ಪೊಲೀಸರು ಗೊಂದಲಕ್ಕೀಡಾಗಿದ್ದಾರೆ.

Share with Friends
author avatar
Digital Desk