Health | ಆರೋಗ್ಯLatestTop Storiesಗದಗ-Gadag

ಬಿಸಿ ಊಟ ಸೇವಿಸಿ 100ಕ್ಕೂ ಅಧಿಕ ಮಕ್ಕಳು ಅಸ್ವಸ್ಥ..!

ಗದಗ : ಗದಗ ಜಿಲ್ಲೆಯ ಮುಂಡರಗಿ ಬಿಡನಾಳದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳಿಗೆ ಮಧ್ಯಾಹ್ನ ಬಿಸಿ ಊಟದ ವ್ಯವಸ್ಥೆ ಇದ್ದು , ಈಗ ಮಕ್ಕಳ ಬಿಸಿ ಊಟಕ್ಕೂ ಈಗ ಅಡ್ಡಿ ಉಂಟಾಗಿದೆ?

ಅಡುಗೆ ಸಿಬ್ಬಂದಿಗಳ ನಿರ್ಲಕ್ಷದಿಂದ ಮಕ್ಕಳು ಸೇವಿಸುವ ಊಟದಲ್ಲಿ ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ .ಊಟ ತಿಂದ ಬಳಿಕ ಮಕ್ಕಳು ವಾಂತಿ ಮತ್ತು ಬೇಧಿ ಇಂದ ನರಳಾಡುತ್ತಿದ್ದರೆ .

ಕಲುಷಿತ ಊಟ ಸೇವಿಸದ ಮಕ್ಕಳು ಅಶ್ವಸತಗೊಂಡಿದ್ದಾರೆ ಎಂದು ಹೇಳಲಾಗಿದೆ ಹಾಗು ಅಸ್ವಸ್ಥಗೊಂಡ ಮಕ್ಕಳನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ .

ಮಕ್ಕಳ ಪೋಷಕರು ಈ ವಿಚಾರದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .ಮುಖ್ಯ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳ ವಿರುದ್ಧ ಪಾಲಕರ ಆಕ್ರೋಶ ಹೊರಹಾಕಿದ್ದಾರೆ .

ಮಕ್ಕಳ ಅಸ್ವಸ್ಥತೆಗೆ ನಿಖರ ಕಾರಣ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ ಎಂದು ಪೋಷಕರು ದೂರು ನೀಡಿದ್ದಾರೆ .ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share with Friends
author avatar
Digital Desk