LatestTop Storiesಬೆಂಗಳೂರು-Bengaluru

ಫುಟ್‌ಪಾತ್, ಚರಂಡಿಗೆ ಕಟ್ಟಡ ತ್ಯಾಜ್ಯ ಸುರಿದ ಕಟ್ಟಡ ಮಾಲೀಕನಿಗೆ ₹1 ಲಕ್ಷ ದಂಡ ಹಾಕಿದ ಜಿಬಿಎ..

ಬೆಂಗಳೂರು : ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲ 1ನೇ ಬ್ಲಾಕ್‌ನ 6ನೇ ಮುಖ್ಯರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಿಂದ ಕಟ್ಟಡ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳವಾದ ಫುಟ್‌ಪಾತ್ ಮತ್ತು ಚರಂಡಿಗೆ ಸುರಿಯಲಾಗಿತ್ತು. ಬೆಂಗಳೂರು : ಫುಟ್‌ಪಾತ್ ಹಾಗೂ ಚರಂಡಿಗೆ ಕಟ್ಟಡ ತ್ಯಾಜ್ಯ ಸುರಿದ ಕಟ್ಟಡ ಮಾಲೀಕರಿಗೆ ಜಿಬಿಎ ಅಧಿಕಾರಿಗಳು ₹1 ಲಕ್ಷ ದಂಡ ವಿಧಿಸಿದ್ದಾರೆ.

ನಿಯಮ ಉಲ್ಲಂಘಿಸಿರುವುದನ್ನು ಗಮನಿಸಿದ ಜಿಬಿಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಟ್ಟಡ ಮಾಲೀಕ ಡೇವಿಡ್‌ಗೆ ₹1 ಲಕ್ಷ ದಂಡವಿಧಿಸಿದ್ದಾರೆ.

ಇದರ ಜೊತೆಗೆ ಸುರಿದಿರುವ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮಾಲೀಕರೇ ತಮ್ಮ ಸ್ವಂತ ಖರ್ಚಿನಲ್ಲಿ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಬೇಕು ಎಂದು ಆದೇಶಿಸಿದ್ದಾರೆ.

ಫುಟ್‌ಪಾತ್, ಚರಂಡಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತ ಜಿಬಿಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Share with Friends
author avatar
Digital Desk