
ಲೋಕಾಯುಕ್ತ ಹಾಗೂ ಪೊಲೀಸ್ ಅಧಿಕಾರಿಗಳ ಮೇಲೆ ದೌರ್ಜನ್ಯ ..
ವಿಜಯಪುರ : ಬಾಗಲಕೋಟೆ ಜಿಲ್ಲೆಗಳ ಪೊಲೀಸ್ ಹಾಗೂ ಲೋಕಾಕ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದವತಿಯಿಂದ ಧರಣಿ ಹಮ್ಮಿಕೊಂಡಿದ್ದಾರೆ .
ಲೋಕಾಯುಕ್ತ ಹಾಗೂ ಪೊಲೀಸ್ ಅಧಿಕಾರಿಗಳ ದಲಿತರ ಮೇಲೆ ದೌರ್ಜನ್ಯ ಎಸಿಗಿದ್ದು ಅವರ ಮೇಲೆ ಪ್ರಕರಣ ದಾಖಲು ಮಾಡುವಂತೆ ಒತ್ತಾಯಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದುಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಕಾರ್ಯಕ್ರಮಕ್ಕೆ ಪೊಲೀಸರು ಉದ್ದೇಶಪೂರ್ವಕಾಗಿ ಅಡ್ಡಿಪಡಿಸಿದ್ದಾರೆ.
ಹೀಗೆ ಸತತ ದಲಿತರ ಮೇಲೆ ತುಂಬಾ ಅನ್ಯಾಯವಾಗುತ್ತಿದ್ದು ಹಲವು ಇಲಾಖೆಗಳು ಕೂಡ ಭಾಗಿಯಾಗಿದ್ದು ವಿಜಯಪುರ ಲೋಕಾಯುಕ್ತ ಘಟಕದ ಅಧಿಕಾರಿಗಳಾದ ಟೀ ಮಲ್ಲೇಶ್ ಹಾಗೂ ಆನಂದ್ ಟಕ್ಕನ್ನವರ್ ಅವರು ಕರ್ತವ್ಯ ದುರುಪಯೋಗ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರ ಎಸಿಗಿದ್ದಾರೆ ಎಂದು ತಿಳಿದುಬಂದಿದೆ .
ಇವರ ಆರೋಪಗಳು ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಈ ಕುರಿತು ಸಿಬಿಐ ತನಿಕೆಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಸಂಘಟನೆ ನಿರ್ಧರಿಸಿದೆ .
ಎಸ್ ಪಿ ಲಕ್ಷ್ಮಣ ಬಿ ನಿಂಬರಗಿ ಗಾಂಧಿ ಚೌಕ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿಜಯಪುರ ಲೋಕಾಯುಕ್ತ ಘಟಕದ ಟೀ ಮಲ್ಲೇಶ್ ಮತ್ತು ಆನಂದ್ ಟಕ್ಕನ್ನವರ್ ಕೋಲಾರ್ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ್ ನಾಯಕ್ ಇವರ ವಿರುದ್ಧ ಕಾನೂನು ಬದ್ಧವಾಗಿ ದಾಖಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು
15 ದಿನದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಗೃಹ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ರಾಜ್ಯ ಸಂಚಾಲಕರು ಪರಶುರಾಮ್ ನೀಲನಾಯಕ ಮತ್ತು ಜಿಲ್ಲಾ ಸಂಚಾಲಕರು ತುಳಜಾ ರಾಮ್ ನಿಲ್ ನಾಯಕ್ ತಿಳಿಸಿದರು.
