Latestರಾಜ್ಯ-Karnataka

ರಾಜ್ಯದಲ್ಲಿ SIR ಪ್ರಕ್ರಿಯೆಯ ಅರ್ಜಿಗಳ ಡಿಜಿಟಲೀಕರಣ ಶೇ.100ರಷ್ಟು ಪೂರ್ಣ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯ ಅರ್ಜಿಗಳ ಡಿಜಿಟಲೀಕರಣ ಶೇ.100ರಷ್ಟು ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಒಟ್ಟು 5,54,32,314 ಮತದಾರರು ಇದ್ದು, ಈ ಪೈಕಿ 4,45,34,784 ಮತದಾರರ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಇನ್ನೂ 1,08,97,530 ಮತದಾರರ ಮಾಹಿತಿ ಡಿಜಿಟಲೀಕರಣವಾಗಿಲ್ಲ ಎಂದು ತಿಳಿಸಲಾಗಿದೆ.

ಡಿಜಿಟಲೀಕರಣವಾಗದ 1,08,97,530 ಮತದಾರರನ್ನು ASDDO ಎಂದು ಗುರುತಿಸಲಾಗಿದೆ. ಇದರಲ್ಲಿ Absent (ಗೈರು), Shifted (ಸ್ಥಳಾಂತರ), Death (ಮೃತ), Duplicate (ನಕಲಿ/ದ್ವಂದ್ವ) ಹಾಗೂ Other (ಇತರೆ)** ಪ್ರಕರಣಗಳು ಸೇರಿವೆ ಎಂದು ಆಯೋಗ ತಿಳಿಸಿದೆ.

ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯಂತೆ, ASDDO ಪಟ್ಟಿಯಲ್ಲಿ 11.87% ಮೃತ ಮತದಾರರು, 2.95% ಪತ್ತೆಯಾಗದ ಮತದಾರರು ಹಾಗೂ 1.26% ಇತರೆ ಪ್ರಕರಣಗಳು ಇರುವುದಾಗಿ ಉಲ್ಲೇಖಿಸಲಾಗಿದೆ. ಈಗಾಗಲೇ ASDDO ಪಟ್ಟಿಯನ್ನು ರಾಜ್ಯದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳಿಗೂ ಚುನಾವಣಾ ಆಯೋಗ ನೀಡಿದೆ.

ಇನ್ನು SIR ಪ್ರಕ್ರಿಯೆಯಲ್ಲಿ ಬೆಂಗಳೂರು ಭಾಗದಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಂಡುಬಂದಿಲ್ಲ ಎನ್ನಲಾಗುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ.

Share with Friends
author avatar
News Desk